×
Ad

ಪೆಗಾಸಸ್ ಸ್ಪೈವೇರ್ ಹಗರಣ: ಎನ್‌ಎಸ್‌ಒ ಕಚೇರಿಗಳ ಪರಿಶೀಲಿಸಿದ ಇಸ್ರೇಲ್ ಅಧಿಕಾರಿಗಳು

Update: 2021-07-29 23:55 IST

ರಾಂಚಿ, ಜು. 29: ಇಸ್ರೇಲ್‌ನ ಅಧಿಕಾರಿಗಳು ತನ್ನ ಕಚೇರಿಗಳ ಪರಿಶೀಲನೆ ನಡೆಸಿರುವುದನ್ನು ಸೈಬರ್ ಭದ್ರತಾ ಸಂಸ್ಥೆ ಎನ್‌ಎಸ್‌ಒ ಸಮೂಹ ಗುರುವಾರ ದೃಢಪಡಿಸಿದೆ. ಪೆಗಾಸಸ್ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಇಸ್ರೇಲ್‌ನ ಪ್ರತಿನಿಧಿಗಳೊಂದಿಗೆ ಕಂಪೆನಿ ‘‘ಸಂಪೂರ್ಣ ಪಾರದರ್ಶಕತೆಯೊಂದಿಗೆ ಸಹಕರಿಸಿದೆ’’ ಎಂದು ಅದು ಹೇಳಿದೆ.

ಇಂಡಿಯಾ ಟುಡೆಗೆ ಗುರುವಾರ ನೀಡಿದ ಹೇಳಿಕೆಯಲ್ಲಿ ಎನ್‌ಎಸ್‌ಒ ವಕ್ತಾರ, ‘‘ಇಸ್ರೇಲ್‌ನ ರಕ್ಷಣಾ ಸಚಿವಾಲಯದ ಪ್ರತಿನಿಧಿಗಳು ನಮ್ಮ ಕಚೇರಿಗಳಿಗೆ ಭೇಟಿ ನೀಡಿರುವುದನ್ನು ನಾವು ದೃಢಪಡಿಸುತ್ತೇವೆ. ನಾವು ಅವರ ಪರಿಶೀಲನೆಯನ್ನು ಸ್ವಾಗತಿಸುತ್ತೇವೆ. ಕಂಪೆನಿ ಇಸ್ರೇಲ್ ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಪಾರದರ್ಶಕವಾಗಿ ಸಹಕರಿಸಲಿದೆ’’ ಎಂದಿದ್ದಾರೆ.

ಇತ್ತೀಚಿಗೆ ಮಾಧ್ಯಮಗಳು ಪ್ರಕಟಿಸಿದ ತಮ್ಮ ವಿರುದ್ಧದ ತಪ್ಪು ಆರೋಪವನ್ನು ನಿರಾಕರಿಸಿ ಕಂಪೆನಿ (ಎನ್‌ಎಸ್‌ಒ) ಪದೇ ಪದೇ ಘೋಷಿಸಿದ ಸತ್ಯವನ್ನು ಈ ಪರಿಶೀಲನೆ ಸಾಬೀತುಪಡಿಸಲಿದೆ ಎಂಬ ಭರವಸೆ ನಮಗಿದೆ ಎಂದು ಅವರು ಹೇಳಿದ್ದಾರೆ.

ಪೆಗಾಸಸ್ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ಭಾಗವಾಗಿ ಇಸ್ರೇಲ್‌ನ ರಕ್ಷಣಾ ಸಚಿವಾಲಯದ ತಂಡ ಎನ್‌ಎಸ್‌ಒ ಸಮೂಹದ ಕೇಂದ್ರ ಕಚೇರಿಗಳಿಗೆ ಮಂಗಳವಾರ ಭೇಟಿ ನೀಡಿದೆ.

ಎನ್‌ಎಸ್‌ಒ ಸಮೂಹ ಪೆಗಾಸಸ್ ಸ್ಪೈವೇರ್ ಅನ್ನು ಮಾರಾಟ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News