ಒಲಿಂಪಿಕ್ಸ್: ಬರಿಗೈಯಲ್ಲಿ ವಾಪಸಾದ ಭಾರತದ ಪಿಸ್ತೂಲ್ ಶೂಟರ್ ಗಳು

Update: 2021-07-30 08:12 GMT
ಮನು ಭಾಕರ್ 

ಟೋಕಿಯೊ: ಶುಕ್ರವಾರ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಶೂಟರ್ ಗಳಾದ ಮನು ಭಾಕರ್ ಮತ್ತು ರಾಹಿ ಸರ್ನೋಬತ್ 25 ಮೀಟರ್ ಪಿಸ್ತೂಲ್ ಅರ್ಹತಾ ಸುತ್ತಿನಲ್ಲಿ ಸೋಲನುಭವಿಸಿ ಹೊರ ನಡೆದರು. ಇಬ್ಬರೂ ಕ್ರಮವಾಗಿ ಅಗ್ರ-8 ರಲ್ಲಿ ಸ್ಥಾನ ಪಡೆಯಲು ವಿಫಲರಾದರು.

ಪಿಸ್ತೂಲ್ ಶೂಟರ್‌ಗಳು ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಬಾರಿಗೆ ಬರಿಗೈಯಲ್ಲಿ ಮನೆಗೆ ಮರಳುತ್ತಿದ್ದಾರೆ.

ಮನು ಭಾಕರ್ ತನ್ನ ಮೊದಲ ಈವೆಂಟ್‌ನಲ್ಲಿ  ಮಹಿಳೆಯರ 10 ಮೀ ಏರ್ ಪಿಸ್ತೂಲ್  ಅರ್ಹತೆಯ ಸಮಯದಲ್ಲಿ ಪ್ರಮುಖ ಪಿಸ್ತೂಲ್  ದೋಷದಿಂದಾಗಿ ಸುಮಾರು 20 ನಿಮಿಷಗಳ ಆಟವನ್ನು ಕಳೆದುಕೊಂಡಿದ್ದರು.

ಸೌರಭ್ ಚೌಧರಿ ಅವರೊಂದಿಗೆ ಮನು ಭಾಕರ್ ಮಿಶ್ರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮೊದಲ ಹಂತದ ಅರ್ಹತಾ ಪಂದ್ಯವನ್ನು ಮುನ್ನಡೆಸಿದ ನಂತರ ಇಬ್ಬರೂ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.

ಭಾಕರ್ ಶುಕ್ರವಾರ ನಡೆದ ತನ್ನ ಕೊನೆಯ ಈವೆಂಟ್‌ನಲ್ಲಿ  ಅಗ್ರ -8 ರಲ್ಲಿ ಸ್ಥಾನ ಪಡೆಯಲಾಗದೆ ನಿರ್ಗಮಿಸಿದರು.  ಅರ್ಹತಾ ಸುತ್ತಿನಲ್ಲಿ ಅಗ್ರ -8 ಶೂಟರ್‌ಗಳು ಫೈನಲ್‌ಗೆ ಪ್ರವೇಶಿಸುತ್ತಾರೆ. ಟೋಕಿಯೊ ಕ್ರೀಡಾಕೂಟದಲ್ಲಿ ಮೂರು ಸ್ಪರ್ಧೆಗಳಲ್ಲಿ ಭಾಗವಹಿಸಿದ ಏಕೈಕ ಭಾರತೀಯ ಶೂಟರ್ ಭಾಕರ್. ಆದರೆ ಅವರಿಗೆ ಒಂದು ಸ್ಪರ್ಧೆಯಲ್ಲೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News