ಒಲಿಂಪಿಕ್ಸ್: ನೊವಾಕ್ ಜೊಕೊವಿಕ್ ಗೋಲ್ಡನ್ ಸ್ಲಾಮ್ ಕನಸು ಭಗ್ನಗೊಳಿಸಿದ ಅಲೆಕ್ಸಾಂಡರ್ ಝ್ವೆರೆವ್

Update: 2021-07-30 11:54 GMT

ಟೋಕಿಯೊ: ಸರ್ಬಿಯದ ಸ್ಟಾರ್ ಟೆನಿಸಿಗ ನೊವಾಕ್ ಜೊಕೊವಿಕ್ ಟೋಕಿಯೊ ಒಲಿಂಪಿಕ್ಸ್ ಪುರುಷರ ಸಿಂಗಲ್ಸ್ ನ ಸೆಮಿ ಫೈನಲ್ ನಲ್ಲಿ ಸುತ್ತಿನಲ್ಲಿ ಸೋತಿದ್ದಾರೆ. ಈ ಮೂಲಕ ಅವರ ಕ್ಯಾಲಂಡರ್ ಗೋಲ್ಡನ್ ಗ್ರ್ಯಾನ್ ಸ್ಲಾಮ್ ಗೆಲ್ಲುವ  ಕನಸು ಕಮರಿದೆ.

ವಿಶ್ವದ ನಂ.1 ಟೆನಿಸ್ ತಾರೆ ಜೊಕೊವಿಕ್ ಅವರನ್ನು ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್  1-6, 6-3, 6-1 ಸೆಟ್ ಗಳ ಅಂತರದಿಂದ ಸೋಲಿಸಿದರು.

ಝ್ವರೆವ್ ರವಿವಾರ ನಡೆಯಲಿರುವ ಫೈನಲ್ ನಲ್ಲಿ ರಶ್ಯದ ಕರೆನ್ ಖಚನೊವ್ ಅವರನ್ನುಎದುರಿಸಲಿದ್ದಾರೆ.

ಸರ್ಬಿಯದ ಸ್ಟಾರ್ ಆಟಗಾರ ಜೊಕೊವಿಕ್ ಈ ವರ್ಷ ಈಗಾಗಲೇ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಓಪನ್ ಟ್ರೋಫಿಯನ್ನು ಜಯಿಸಿದ್ದಾರೆ. 1988ರಲ್ಲಿ ಸ್ಟೆಫಿ ಗ್ರಾಫ್ ದಾಖಲೆಯನ್ನು ಸರಿಗಟ್ಟಿ ಗೋಲ್ಡನ್ ಸ್ಲಾಮ್ ಜಯಿಸಲು  ಅಮೆರಿಕನ್ ಓಪನ್ ಕಿರೀಟ ಹಾಗೂ ಒಲಿಂಪಿಕ್ಸ್ ಚಿನ್ನದ ಪದಕ ಗೆಲ್ಲುವ ಅಗತ್ಯವಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News