ಈ ವರ್ಷ ಭಾರತದಲ್ಲಿ ಅತ್ಯಧಿಕ ಕಾಡಿನ ಬೆಂಕಿ ಪ್ರಕರಣ: ಸರಕಾರ

Update: 2021-07-30 18:26 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜು.30: ಭಾರತದಲ್ಲಿ 2020ರ ನವೆಂಬರ್ನಿಂದ 2021ರ ಜೂನ್ ನಡುವಿನ ಅವಧಿಯಲ್ಲಿ 3,45,989 ಕಾಡಿನ ಬೆಂಕಿಗೆ ಸಂಬಂಧಿಸಿದ ಎಚ್ಚರಿಕೆ ದಾಖಲಾಗಿದ್ದು ಕಳೆದ 3 ವರ್ಷದಲ್ಲಿ ಇದು ಅತ್ಯಧಿಕವಾಗಿದೆ. ಇದರ ಹಿಂದಿನ ವರ್ಷದ ಇದೇ ಅವಧಿಯಲ್ಲಿ ದಾಖಲಾಗಿರುವುದಕ್ಕಿಂತಲೂ ಇದು 3 ಪಟ್ಟು ಅಧಿಕವಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ. ‌

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಪರಿಸರ ಇಲಾಖೆಯ ಸಹಾಯಕ ಸಚಿವ ಅಶ್ವಿನಿ ಚೌಬೆ, ಕಾಡಿನ ಬೆಂಕಿಗೆ ಸಂಬಂಧಿಸಿದ ಎಚ್ಚರಿಕೆಯನ್ನು ಅರಣ್ಯ ಇಲಾಖೆ ಎಸ್ಎನ್ಪಿಪಿ-ವಿಐಐಆರ್ಎಸ್ ಸೆನ್ಸರ್ ಮೂಲಕ ದಾಖಲಿಸಿದೆ. 2019ರ ನವೆಂಬರ್ ಮತ್ತು 2020ರ ಜೂನ್ ಮಧ್ಯೆ 1,24,473 , 2018 ನವೆಂಬರ್ ಮತ್ತು 2019 ಜೂನ್ ಮಧ್ಯೆ 2,10,286 ಎಚ್ಚರಿಕೆ ದಾಖಲಾಗಿದೆ. 

ತರಗೆಲೆ ಶೇಖರವಾಗುವುದು, ಒಣಗಿದ ಕೊಂಬೆ, ಮರಗಳು ಇತ್ಯಾದಿ ಪ್ರಾಕೃತಿಕ ಮತ್ತು ಮಾನವಜನ್ಯ ಕಾರಣಗಳಿಂದ ಕಾಡಿನ ಬೆಂಕಿ ಉಂಟಾಗುತ್ತದೆ ಎಂದು ಈ ಬಗ್ಗೆ ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆ, ವಿಶ್ವಬ್ಯಾಂಕ್ ನಡೆಸಿದ ಜಂಟಿ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ. ಭಾರತದಲ್ಲಿ ಸಂಭವಿಸುವ ಬಹುತೇಕ ಕಾಡಿನ ಬೆಂಕಿಯಲ್ಲಿ ನೆಲದಲ್ಲಿ ಬೆಂಕಿ ಹರಡುವುದರಿಂದ ನೆಲದ ಸಸ್ಯಗಳು ಸುಟ್ಟುಹೋಗುತ್ತವೆ. 2020ರ ನವೆಂಬರ್ನಿಂದ 2021ರ ಜೂನ್ ನಡುವಿನ ಅವಧಿಯಲ್ಲಿ ಒಡಿಶಾದಲ್ಲಿ 51,986 , ಮಧ್ಯಪ್ರದೇಶದಲ್ಲಿ 47,795 ಮತ್ತು ಛತ್ತೀಸ್ಗಢದಲ್ಲಿ 38,106 ಅರಣ್ಯಬೆಂಕಿ ಪ್ರಕರಣ ವರದಿಯಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News