ಮಣಿಪಾಲ ಕೆಎಂಸಿಗೆ ರಾಮಕೃಷ್ಣ ಬಜಾಜ್ ರಾಷ್ಟ್ರೀಯ ಪ್ರಶಸ್ತಿ

Update: 2021-07-31 14:00 GMT

ಮಣಿಪಾಲ, ಜು.31: ಮಣಿಪಾಲದ ಕಸ್ತೂರ್‌ಬಾ ಆಸ್ಪತ್ರೆಗೆ ಪ್ರತಿಷ್ಠಿತ ಐಎಂಸಿ ರಾಮಕೃಷ್ಣ ಬಜಾಜ್ ರಾಷ್ಟ್ರೀಯ ಗುಣಮಟ್ಟ ಕಾರ್ಯಕ್ಷಮತೆ ಶ್ರೇಷ್ಠತೆ ಪ್ರಶಸ್ತಿ- 2020 ಲಭಿಸಿದೆ.

ಮುಂಬಯಿಯ ಐಎಂಸಿ ರಾಮಕೃಷ್ಣ ಬಜಾಜ್ ರಾಷ್ಟ್ರೀಯ ಗುಣಮಟ್ಟ ಪ್ರಶಸ್ತಿ ಟ್ರಸ್ಟ್ ರಾಷ್ಟ್ರೀಯ ಮಟ್ಟದಲ್ಲಿ ನೀಡುವ ಗುಣಮಟ್ಟದ ಕಾರ್ಯ ಕ್ಷಮತೆ ಮತ್ತು ಶ್ರೇಷ್ಠತೆ (ಪರ್ಫಾರ್ಮೆನ್ಸ್ ಎಂಡ್ ಎಕ್ಸಲೆನ್ಸ್) ಪ್ರಶಸ್ತಿ ಇದಾಗಿದೆ. ಕೆಎಂಸಿ ಅರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಗೆ ಈ ಪ್ರಶಸ್ತಿ ದೊರೆತಿದೆ.

ಶನಿವಾರ ಮಣಿಪಾಲದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ (ಎಂಇಎಂಜಿ) ಮುಖ್ಯಸ್ಥ ಡಾ. ರಂಜನ್ ಆರ್.ಪೈ ಅವರು ಟ್ರೋಫಿ, ಪ್ರಶಸ್ತಿ ಫಲಕ ಮತ್ತು ಪ್ರಮಾಣಪತ್ರವನ್ನು ಕಸ್ತೂರ್‌ಬಾ ಆಸ್ಪತ್ರೆ ಮಣಿಪಾಲದ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ.ಮುತ್ತಣ್ಣ ಮತ್ತು ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಇವರಿಗೆ ಹಸ್ತಾಂತರಿಸಿದರು.

ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಮಣಿಪಾಲ ಆಸ್ಪತ್ರೆಗಳ ಮುಖ್ಯಸ್ಥ ಡಾ. ಸುದರ್ಶನ್ ಬಲ್ಲಾಳ್, ಮಣಿಪಾಲ ಮಾಹೆ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ. ವೆಂಕಟೇಶ್, ಸಹ ಉಪಕುಲಪತಿ (ಆರೋಗ್ಯ ವಿಜ್ಞಾನ ವಿಭಾಗ) ಡಾ.ಪಿ.ಎಲ್.ಎನ್.ಜಿ. ರಾವ್, ಕುಲಸಚಿವರಾದ ಡಾ. ನಾರಾಯಣ ಸಭಾಹಿತ್, ಕೆಎಂಸಿ ಡೀನ್ ಡಾ. ಶರತ್ ಕೆ.ರಾವ್, ಕೆಎಂಸಿ ಆಸ್ಪತ್ರೆಯ ಗುಣಮಟ್ಟ ಅನುಷ್ಠಾನದ ಸಲಹೆಗಾರ ಡಾ. ಸುನೀಲ್ ಸಿ ಮುಂಡ್ಕೂರ್ ಉಪಸ್ಥಿತರಿದ್ದರು.

ಈ ಪ್ರಶಸ್ತಿಯೊಂದಿಗೆ, ಮಣಿಪಾಲ ಕಸ್ತೂರ್‌ಬಾ ಆಸ್ಪತ್ರೆಯ ಗುಣಮಟ್ಟದ ಮಾನ್ಯತೆಗಳ ಕಿರೀಟಕ್ಕೆ ಮತ್ತೊಂದು ಗರಿ ಸೇರಿದಂತಾಗಿದೆ. ಐಎಂಸಿ ರಾಮಕೃಷ್ಣ ಬಜಾಜ್ ರಾಷ್ಟ್ರೀಯ ಗುಣಮಟ್ಟದ ಪ್ರಶಸ್ತಿಯು ದೇಶದ ಅತ್ಯಂತ ಪ್ರತಿಷ್ಠಿತ ರಾಷ್ಟ್ರೀಯ ಗುಣಮಟ್ಟದ ಪ್ರಶಸ್ತಿಗಳಲ್ಲಿ ಒಂದಾಗಿದೆ. ಈ ಪ್ರಶಸ್ತಿಯನ್ನು ಐಎಂಸಿ ಮಾಜಿ ಅಧ್ಯಕ್ಷ ಮತ್ತು ಪ್ರಮುಖ ಕೈಗಾರಿಕೋದ್ಯಮಿಯಾಗಿದ್ದ ದಿ. ರಾಮಕೃಷ್ಣ ಬಜಾಜ್ ಅವರ ಹೆಸರಿನಲ್ಲಿ ನೀಡಲಾಗು ತ್ತದೆ. ಪ್ರಶಸ್ತಿಗೆ ಆಯ್ಕೆಯು ಕಠಿಣ ವೌಲ್ಯಮಾಪನದ ವುೂಲಕ ನಡೆಯುತ್ತದೆ.

ಈ ಪ್ರಶಸ್ತಿಯನ್ನು ಕಸ್ತೂರ್ಬಾ ಆಸ್ಪತ್ರೆಗೆ ಸಾಮಾಜಿಕ ಜವಾಬ್ದಾರಿ, ನೈತಿಕ ಮತ್ತು ಪಾರದರ್ಶಕ ಆರೋಗ್ಯ ಸೇವೆ, ಕ್ರಿಯಾತ್ಮಕ ನಾಯಕತ್ವ, ರೋಗಿ ಕೇಂದ್ರಿತ ಸೇವೆ, ಉದ್ಯೋಗಿಗಳ ದೃಷ್ಟಿಕೋನ, ಅತ್ಯುತ್ತಮ ಸಂಶೋಧನೆ ಮತ್ತು ತಾಂತ್ರಿಕ ಪರಿಣತಿಯೊಂದಿಗೆ ಎಲ್ಲಾ ಸೇವೆಗಳನ್ನು ಕೈಗೆಟುಕುವ ದರದಲ್ಲಿ ಒಂದೇ ಸೂರಿನಡಿ ಒದಗಿಸುತ್ತಿರುವ ಅಂಶಗಳನ್ನು ಗಮನಿಸಿ ನೀಡಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News