ಉಡುಪಿ ಜಿಲ್ಲೆಯ ರೈತರಿಗೆ ಕೃಷಿ ಇಲಾಖೆಯ ಸೂಚನೆಗಳು

Update: 2021-07-31 15:47 GMT

ಉಡುಪಿ, ಜು.31: ಡಿಎಪಿ ರಸಗೊಬ್ಬರ ಕೇವಲ ಸಾರಜನಕ ಹಾಗೂ ರಂಜಕ ಒದಗಿಸುವ ಒಂದು ಕಾಂಪ್ಲೆಕ್ಸ್ ಗೊಬ್ಬರವಾಗಿದ್ದು, ಡಿಎಪಿ ಇಲ್ಲದೆ ಮಾರುಕಟ್ಟೆ ಯಲ್ಲಿ ಲಭ್ಯವಿರುವ ಇತರ ಪರ್ಯಾಯ ರಸಗೊಬ್ಬರ ಬಳಸಿ ಸಾರಜನಕ ಹಾಗೂ ರಂಜಕ ಪೋಷಕಾಂಶಗಳನ್ನು ಬೆಳೆಗಳಿಗೆ ನೀಡಬಹುದು.

ರೈತರು ಕೇವಲ ಡಿಎಪಿ ಮೇಲೆ ಅವಲಂಬಿತರಾಗದೆ, ಬದಲಾಗಿ ಪೋಷಕಾಂಶಗಳನ್ನು ಒದಗಿಸುವ, ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ದರ್ಜೆಯ ರಸಗೊಬ್ಬರಗಳನ್ನು ಸಂಯೋಜಿಸಿ ಬಳಕೆ ಮಾಡಬಹುದು. ನೇರ ರಸಗೊಬ್ಬರಗಳಾದ ಯೂರಿಯಾ ಹಾಗೂ ರಾಕ್ ಫಾಸ್ಟ್ಟೇಟ್ ಸಂಯೋಜಿಸಿ ಅಥವಾ ಕಾಂಪ್ಲೆಕ್ಸ್ ಗೊಬ್ಬರಗಳಾದ 20:20:0:13 ಹಾಗೂ 10:26:26 ಗಳನ್ನು ಸಂಯೋಜಿಸಿ ಡಿಎಪಿಗೆ ಪರ್ಯಾಯವಾಗಿ ಬಳಸಬಹುದು.

100 ಕೆ.ಜಿ ಡಿಎಪಿ ಪೋಷಕಾಂಶ ಒದಗಿಸಲು ಈ ಕೆಳಗಿನ ಯಾವುದೇ ಸಂಯೋಜನೆ ಬಳಸಬಹುದು:
 ಮೊದಲ ಸಂಯೋಜನೆ (ನೇರ ರಸಗೊಬ್ಬರ ಬಳಸಿ) ಯೂರಿಯಾ: 40ಕೆ. ಜಿ. ಹಾಗೂ ರಾಕ್ ಫಾಸ್ಪೇಟ್: 255 ಕೆ.ಜಿ. ಎರಡನೇ ಸಂಯೋಜನೆ (ನೇರ ಹಾಗೂ ಎನ್.ಪಿ ಕಾಂಪ್ಲೆಕ್ಸ್ ಗೊಬ್ಬರ ಬಳಸಿ) ರಾಕ್ ಫಾಸ್ಪೇಟ್: 150 ಕೆ.ಜಿ. ಹಾಗೂ 20:20:0:13: 90 ಕೆ.ಜಿ ಮತ್ತು ಮೂರನೇ ಸಂಯೋಜನೆ (ನೇರ ಹಾಗೂ ಎನ್.ಪಿ ಹಾಗೂ ಎನ್.ಪಿ.ಕೆ ಕಾಂಪ್ಲೆಕ್ಸ್ ಗೊಬ್ಬರ ಬಳಸಿ) ರಾಕ್ ಫಾಸ್ಪೇಟ್: 90 ಕೆ.ಜಿ, 20:20:0:13: 50 ಕೆ.ಜಿ ಹಾಗೂ 10:26:26: 75 ಕೆ.ಜಿ. ರಸಗೊಬ್ಬರಗಳ ಸಂಯೋಜನೆಯನ್ನು ಬಳಸಬಹುದು.

ರೈತರು ಯಾವುದೇ ರೀತಿಯ ಆತಂಕಕ್ಕೊಳಗಾಗದೇ ಮೇಲೆ ನೀಡಿರುವ ಪರ್ಯಾಯ ರಸಗೊಬ್ಬರಗಳ ಸಂಯೋಜನೆ ಮೂಲಕ ಬದಲಿ ವ್ಯವಸ್ಥೆ ಮಾಡಿ ಕೊಳ್ಳಬಹುದು. ಈ ಸಂಯೋಜನೆ ಮೂಲಕ ಗೊಬ್ಬರ ಬಳಸುವುದರಿಂದ ಇಳುವರಿ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ವೆಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News