"ಎಲ್ಲರನ್ನೂ ಕೊಂದು ಹಾಕಿ" ಎಂಬ ಮಿಝೋರಾಂ ರಾಜ್ಯಸಭೆ ಸದಸ್ಯನ ಹೇಳಿಕೆಗೆ ಬಿಜೆಪಿ ನಾಯಕನ ಬೆಂಬಲ

Update: 2021-07-31 17:48 GMT

ಗುವಾಹಟಿ, ಜು. 30: ಅಸ್ಸಾಂ-ಮಿಝೋರಾಂ ಗಡಿ ಘರ್ಷಣೆಯ ಹಿನ್ನೆಲೆಯಲ್ಲಿ ಮಿಝೋರಾಂ ರಾಜ್ಯ ಸಭೆ ಸದಸ್ಯ ಕೆ. ವಾನ್ಲಾಲ್ವೇನ ಅವರು ನೀಡಿದ ‘‘ಎಲ್ಲರನ್ನೂ ಕೊಂದು ಹಾಕಿ’’ ಎಂಬ ವಿವಾದಾತ್ಮಕ ಹೇಳಿಕೆಗೆ ಮೇಘಾಲಯದ ಕಾರ್ಮಿಕ ಸಚಿವ ಹಾಗೂ ಬಿಜೆಪಿ ನಾಯಕ ಸಂಬೂರ್ ಶುಳ್ಲೈ ಬೆಂಬಲ ವ್ಯಕ್ತಪಡಿಸಿದ್ದಾರೆ.

ಗಡಿ ವಿವಾದ ಹಾಗೂ ವಾನ್ಲಾಲ್ವೇನ ಅವರ ಹೇಳಿಕೆ ಕುರಿತು ಪ್ರಶ್ನಿಸದಾಗ  ನೂತನ ನಿಯೋಜಿತ ಸಂಪುಟ ಸಚಿವ ಹಾಗೂ ದಕ್ಷಿಣ ಶಿಲ್ಲಾಂಗ್ನ ಬಿಜೆಪಿ ಶಾಸಕ ಸಂಬೂರ್ ಶುಳ್ಲೈ, ಅಂತರ್ ರಾಜ್ಯ ಗಡಿ ರಕ್ಷಿಸಲು ಶತ್ರುಗಳ ವಿರುದ್ಧ ಮಿಝೋರಾಂ ತನ್ನ ಪೊಲೀಸ್ ಪಡೆಯನ್ನು ಬಳಸಬೇಕು ಎಂದಿದ್ದಾರೆ.

ಅಧಿಕಾರ ಸ್ವೀಕರಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಶುಳ್ಳೈ, ತಮ್ಮ ಅನನ್ಯತೆ ರಕ್ಷಣೆಗೆ ತಾವು ಸಂಘಟಿತರಾಗಿದ್ದೇವೆ ಎಂಬುದನ್ನು ಮಿಝೋರಾಂನ ಜನತೆ ಹಾಗೂ ಪೊಲೀಸರು ಸಾಬೀತುಪಡಿಸಿದ್ದಾರೆ ಎಂದಿದ್ದಾರೆ.

‘‘ಈ ಪ್ರೇರಣೆ (ಪೊಲೀಸರು ಹಾಗೂ ಜನರು) ನಮಗೆ ಇರಬೇಕು. ಗಡಿ ಪ್ರದೇಶದಲ್ಲಿ ಅಸ್ಸಾಂನ ಜನರು ನಮ್ಮ ಜನರಿಗೆ ಕಿರುಕುಳ ನೀಡಿದರೆ, ಮಾತುಕತೆ ಹಾಗೂ ಟೀ ಗೆ ಮಾತ್ರ ಸಮಯ ಬರುವುದಿಲ್ಲ. ನಾವು ಪ್ರತಿಪ್ರತಿಕ್ರಿಯೆಸುತ್ತೇವೆ. ನಾವು ಅಲ್ಲೇ ಕಾರ್ಯಾಚರಿಸುತ್ತೇವೆ ಎಂಬುದನ್ನು ಇದು ತಿಳಿಸಿದೆ’’ ಎಂದು ಶುಳ್ಳೈ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News