ಬಿಹಾರದಲ್ಲಿ ವರದಿಯಾಗದೇ ಇದ್ದ 6,420 ಕೋವಿಡ್‌ ಸಾವುಗಳ ಸಂಖ್ಯೆ: ಸಿಪಿಐ-ಎಂಎಲ್ ಸಮೀಕ್ಷೆ

Update: 2021-07-31 18:25 GMT

ಪಾಟ್ನಾ, ಜು. 30: ಬಿಹಾರ್ನ 9 ಜಿಲ್ಲೆಗಳ 1,693 ಗ್ರಾಮಗಳಲ್ಲಿ ಕೋವಿಡ್ ಲಕ್ಷಣ ಇರುವ ವರದಿಯಾಗದ 6,420 ಸಾವಿನ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ ಎಂದು ಸಿಪಿಐ-ಎಂಎಲ್ (ಲಿಬರೇಶನ್) ಪ್ರತಿಪಾದಿಸಿದೆ. ಪಕ್ಷದ ಕಾರ್ಯಕರ್ತರು ನಡೆಸಿದ ಸಮೀಕ್ಷೆಯಲ್ಲಿ ಕೋವಿಡ್ ಲಕ್ಷಣ ಇಲ್ಲದ ಇನ್ನೂ 780 ಸಾವಿನ ಪ್ರಕರಣಗಳು ಪತ್ತೆಯಾಗಿವೆ ಎಂದು ಅದು ಹೇಳಿದೆ.

ಕೋವಿಡ್ ಎರಡನೇ ಅಲೆ ಸಂದರ್ಭ ಬಿಹಾರ್ ಸರಕಾರ ಕೋವಿಡ್ ನಿಂದ ಸಂಭವಿಸಿದ ವಾಸ್ತವ ಸಾವಿನ ಸಂಖ್ಯೆಗಿಂತ 20 ಪಟ್ಟು ಕಡಿಮೆ ತೋರಿಸಿದೆ ಎಂದು ಸಿಪಿಐ-ಎಂಎಲ್(ಲಿಬರೇಶನ್) ಹೇಳಿದೆ.

ಬಿಹಾರ್ ವಿಧಾನ ಸಭೆಯ ಸ್ಪೀಕರ್ ಗೆ ಗುರುವಾರ ಸಮೀಕ್ಷೆಯ ಪ್ರತಿಯನ್ನು ಸಲ್ಲಿಸಿದ ಬಳಿಕ ಸಿಪಿಐ-ಎಂಎಲ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ವರದಿಯಾಗದ ಕೋವಿಡ್ನಿಂದ ಸಾವನ್ನಪ್ಪಿದವರ ಅಂಕಿ-ಅಂಶಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿದರು.

ರಾಜ್ಯ ಸರಕಾರ ಕೋವಿಡ್ ಸಾವಿನ ಪ್ರಕರಣಗಳ ಸಂಖ್ಯೆಯನ್ನು ವಾಸ್ತವ ಸಾವಿನ ಪ್ರಕರಣಗಳ ಸಂಖ್ಯೆಗಿಂತ 20 ಪಟ್ಟು ಕಡಿಮೆ ತೋರಿಸಿದೆ. ಇದು ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳಿಗೆ ಮಾಡುವ ಅನ್ಯಾಯ. ನಾವು 9 ಜಿಲ್ಲೆಗಳ 1.693 ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿದ್ದೇವೆ. ಅಲ್ಲದೆ ತಾತ್ಕಾಲಿಕ ಅಂಕಿ-ಅಂಶವನ್ನು ಬಹಿರಂಗಗೊಳಿಸಿದ್ದೇವೆ ಎಂದು ಸಿಪಿಐ-ಎಂಎಲ್ (ಲಿಬರೇಶನ್) ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News