ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಜಮ್ಮು ಕಾಶ್ಮೀರ, ಲಡಾಖ್ ಗೆ ಭೇಟಿ ನೀಡುವ ಸಾಧ್ಯತೆ

Update: 2021-08-01 18:06 GMT

ಹೊಸದಿಲ್ಲಿ, ಆ. 1: ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಆಗಸ್ಟ್ 17ರಿಂದ 22ರ ವರೆಗೆ ಜಮ್ಮು ಹಾಗೂ ಕಾಶ್ಮೀರಕ್ಕೆ ಭೇಟಿ ನೀಡಲಿದೆ.

2019 ಆಗಸ್ಟ್ 5ರಂದು ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಬಳಿಕ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಹಾಗೂ ಕಾಶ್ಮೀರದ ರಾಜಕೀಯ ನಾಯಕರ ನಡುವೆ ಉನ್ನತ ಮಟ್ಟದ ಸಂಹವನ ನಡೆಸಲಿದ್ದಾರೆ.

 ಈ ಸಭೆಯಲ್ಲಿ ಪಾಲ್ಗೊಳ್ಳುವ 14 ನಾಯಕರಲ್ಲಿ ಕಾಂಗ್ರೆಸ್‌ನ ಗುಲಾಂ ನಬಿ ಆಝಾದ್, ತಾರಾ ಚಂದ್, ಜಿ.ಎ. ಮಿರ್, ನ್ಯಾಷನಲ್ ಕಾನ್ಫರೆನ್ಸ್ ನ ಡಾ. ಫಾರೂಕ್ ಅಬ್ದುಲ್ಲಾ ಹಾಗೂ ಉಮರ್ ಅಬ್ದುಲ್ಲಾ, ಪಿಡಿಪಿಯ ಮೆಹಬೂಬಾ ಮುಫ್ತಿ, ಜೆ.ಕೆ. ಆಪ್ನಿ ಪಕ್ಷದ ಅಲ್ತಾಫ್ ಮುಖಾರಿ ಮೊದಲಾದವರು ಸೇರಿದ್ದಾರೆ. ಸಭೆಯಲ್ಲಿ ಹಲವರಿಂದ ರಾಜ್ಯದ ಸ್ಥಾನ ಮಾನ ಮರು ಸ್ಥಾಪಿಸುವ ವಿಷಯದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

ಜಮ್ಮು ಕಾಶ್ಮೀರದ ಕಾಯ್ದೆ 370ನ್ನು ಅಸಾಂವಿಧಾನಿಕ, ಕಾನೂನುಬಾಹಿರ ಹಾಗೂ ಅನೈತಿಕವಾಗಿ ರದ್ದುಗೊಳಿಸಿರುವ ರೀತಿಯನ್ನು ಜಮ್ಮು ಹಾಗೂ ಕಾಶ್ಮೀರದ ಜನರು ಒಪ್ಪಿಕೊಂಡಿಲ್ಲ ಎಂದು ತಾನು ಪ್ರಧಾನಿ ಅವರಿಗೆ ತಿಳಿಸಿರುವುದಾಗಿ ಪಿಡಿಪಿ ವರಿಷ್ಠೆ ಮೆಹಬೂಬಾ ಮುಫ್ತಿ ಹೇಳಿದರು.

 2019 ಆಗಸ್ಟ್ 5ರ ಬಳಿಕ ಜಮ್ಮು ಹಾಗೂ ಕಾಶ್ಮೀರದ ಜನರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಅವರು ಆಕ್ರೋಶಿತರಾಗಿದ್ದಾರೆ, ಅಸಮಾಧಾನಗೊಂಡಿದ್ದಾರೆ. ಭಾವನಾತ್ಮಕವಾಗಿ ಛಿದ್ರಗೊಂಡಿದ್ದಾರೆ. ಅವರಿಗೆ ಅವಮಾನದ ಭಾವನೆ ಉಂಟಾಗಿದೆ. ಕಲಂ 370ಅನ್ನು ಅಸಾಂವಿಧಾನಿಕ, ಕಾನೂನುಬಾಹಿ ಹಾಗೂ ಅನೈತಿಕವಾಗಿ ರದ್ದುಗೊಳಿಸಿರುವ ರೀತಿಯನ್ನು ಜನರು ಒಪ್ಪಿಕೊಂಡಿಲ್ಲ ಎಂದು ತಾನು ಪ್ರಧಾನಿ ಅವರಿಗೆ ತಿಳಿಸಿರುವುದಾಗಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News