ಲಸಿಕೆ ಲಭ್ಯತೆ ಪ್ರಶ್ನಿಸಿದ್ದಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ಆರೋಗ್ಯ ಸಚಿವ ವಾಗ್ದಾಳಿ
ಹೊಸದಿಲ್ಲಿ: ದೇಶದಲ್ಲಿ ಲಸಿಕೆ ಹಾಕುವ ಅಭಿಯಾನವು ಈ ತಿಂಗಳಲ್ಲಿ ತೀವ್ರಗತಿಯಲ್ಲಿ ನಡೆಯಲಿದೆ ಎಂದಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸರಕಾರದ ಲಸಿಕೆ ವಿತರಣಾ ಕಾರ್ಯಕ್ರಮವನ್ನು ಪ್ರಶ್ನಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಳೆದ ತಿಂಗಳು ಲಸಿಕೆಗಳ ಲಭ್ಯತೆಯನ್ನು ಪ್ರಶ್ನಿಸಿದ ರಾಹುಲ್ ಗಾಂಧಿಯವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಮಾಂಡವೀಯ ಅವರು ಜುಲೈನಲ್ಲಿ 13 ಕೋಟಿಗೂ ಹೆಚ್ಚು ಡೋಸ್‌ಗಳನ್ನು ನೀಡಲಾಯಿತು ಹಾಗೂ ಈ ತಿಂಗಳು ಲಸಿಕೆ ಅಭಿಯಾನವು ಇನ್ನಷ್ಟು ವೇಗವನ್ನು ಪಡೆಯಲಿದೆ. ಈ ಸಾಧನೆಗಾಗಿ ನಮ್ಮ ಆರೋಗ್ಯ ಕಾರ್ಯಕರ್ತರ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಹೇಳಿದರು.
"ಈಗ ನೀವೂ ಕೂಡ ಆರೋಗ್ಯ ಕಾರ್ಯಕರ್ತರ ಬಗ್ಗೆ ಹಾಗೂ ದೇಶದ ಬಗ್ಗೆ ಹೆಮ್ಮೆ ಪಡಬೇಕು" ಎಂದು ಗಾಂಧಿಯವರ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಮಾಂಡವಿಯ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
"ಜುಲೈ ತಿಂಗಳು ಕಳೆದಿದೆ. ಆದರೆ ಲಸಿಕೆಯ ಕೊರತೆಯು ನೀಗಿಲ್ಲ’’ ಎಂದು #WhereAreVaccines ಹ್ಯಾಶ್‌ಟ್ಯಾಗ್ ಬಳಸಿ ರಾಹುಲ್ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು