×
Ad

ನಾನು ಎರಡೂ ರಾಜ್ಯಕ್ಕೆ ಸೇರಿದವನು, ಕೃಷ್ಣಾ ನದಿ ನೀರು ಹಂಚಿಕೆ ವಿವಾದ ಆಲಿಸಲಾರೆ: ಮುಖ್ಯ ನ್ಯಾಯಮೂರ್ತಿ ರಮಣ

Update: 2021-08-02 13:46 IST

ಹೊಸದಿಲ್ಲಿ: ನಾನು ಎರಡೂ ರಾಜ್ಯಗಳಿಗೆ ಸೇರಿದವನಾಗಿರುವುದರಿಂದ ಆಂಧ್ರಪ್ರದೇಶ ಹಾಗೂ  ತೆಲಂಗಾಣದ ನಡುವಿನ ಕೃಷ್ಣಾ ನದಿ ನೀರು ಹಂಚಿಕೆ ವಿವಾದವನ್ನು ಆಲಿಸುವುದಿಲ್ಲ ಹಾಗೂ  ಎರಡು ರಾಜ್ಯ ಸರಕಾರಗಳು ಮಧ್ಯಸ್ಥಿಕೆ ವಹಿಸುವಂತೆ ಮುಖ್ಯ ನ್ಯಾಯಮೂರ್ತಿ ಎನ್ .ವಿ. ರಮಣ ಹೇಳಿದರು.

ತಾನು ಪ್ರಕರಣದಿಂದ ಹೊರಗುಳಿಯಬಹುದು ಎಂಬ ಸೂಚನೆಯನ್ನು ಮುಖ್ಯ ನ್ಯಾಯಮೂರ್ತಿ ನೀಡಿದ್ದಾರೆ.

"ನಾನು ಈ ವಿಷಯವನ್ನು ಕಾನೂನುಬದ್ಧವಾಗಿ ಕೇಳಲು ಬಯಸುವುದಿಲ್ಲ. ನಾನು ಎರಡೂ ರಾಜ್ಯಗಳಿಗೆ ಸೇರಿದವನು. ಮಧ್ಯಸ್ಥಿಕೆಯಲ್ಲಿ ವಿಷಯವನ್ನು ಇತ್ಯರ್ಥಪಡಿಸಲು ಸಾಧ್ಯವಾದರೆ ದಯವಿಟ್ಟು ಅದನ್ನು ಮಾಡಿ. ನಾವು ಅದಕ್ಕೆ ಸಹಾಯ ಮಾಡಬಹುದು. ಇಲ್ಲದಿದ್ದರೆ ನಾನು ಇದನ್ನು ಇನ್ನೊಂದು ಪೀಠಕ್ಕೆ ವರ್ಗಾಯಿಸುತ್ತೇನೆ"ಎಂದು ನ್ಯಾಯಮೂರ್ತಿ ರಮಣ ಹೇಳಿದರು.

"ನೀವಿಬ್ಬರೂ ನಿಮ್ಮ ಸರಕಾರಗಳನ್ನು ಮನವರಿಕೆ ಮಾಡಿ , ವಿಷಯವನ್ನು ಇತ್ಯರ್ಥಪಡಿಸಬೇಕೆಂದು ನಾನು ಬಯಸುತ್ತೇನೆ. ನಾವು ಅನಗತ್ಯವಾಗಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ’’ ಎಂದು ಜಸ್ಟಿಸ್ ರಮಣ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಬುಧವಾರ ಪ್ರಕರಣವನ್ನು ಕೈಗೆತ್ತಿಕೊಳ್ಳಲಿದೆ.

ಆಂಧ್ರಪ್ರದೇಶದಿಂದ ಪ್ರತ್ಯೇಕವಾದ ಒಂದು ವರ್ಷದ ನಂತರ 2015 ರಲ್ಲಿ ಒಪ್ಪಂದಕ್ಕೆ ವಿರುದ್ಧವಾಗಿ ತೆಲಂಗಾಣ ರಾಜ್ಯವು ತನ್ನ ವಿದ್ಯುತ್ ಅಗತ್ಯಗಳಿಗಾಗಿ ಕೃಷ್ಣೆಯಿಂದ ಅನಿಯಂತ್ರಿತವಾಗಿ ನೀರು ತೆಗೆಯುತ್ತಿದೆ ಎಂದು ಆಂಧ್ರಪ್ರದೇಶ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News