×
Ad

ತ್ರಿಪುರಾ: ಅಭಿಷೇಕ್ ಬ್ಯಾನರ್ಜಿಯ ಬೆಂಗಾವಲು ವಾಹನದ ಮೇಲೆ ದಾಳಿ, ಬಿಜೆಪಿಯನ್ನು ದೂಷಿಸಿದ ಟಿಎಂಸಿ

Update: 2021-08-02 14:38 IST

ಕೋಲ್ಕತಾ: ಸೋಮವಾರ ತ್ರಿಪುರಾದ ಅಗರ್ತಲಾಕ್ಕೆ ಭೇಟಿ ನೀಡಿದಾಗ ಟಿಎಂಸಿ ಮುಖಂಡ,  ಡೈಮಂಡ್ ಹಾರ್ಬರ್ ಸಂಸದ ಅಭಿಷೇಕ್ ಬ್ಯಾನರ್ಜಿಯವರ ಬೆಂಗಾವಲಿನ ವಾಹನದ ಮೇಲೆ ದಾಳಿ ನಡೆಸಲಾಗಿದೆ ಎಂದು India Today ವರದಿ ಮಾಡಿದೆ.

 ಟಿಎಂಸಿ ನಾಯಕ ತನ್ನ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು, ಈ ದಾಳಿಯನ್ನು ಬಿಜೆಪಿ ಸಂಘಟಿಸುತ್ತಿದೆ ಎಂದು ಆರೋಪಿಸಿದರು.

"ಬಿಜೆಪಿ ಆಡಳಿತದ ತ್ರಿಪುರಾದಲ್ಲಿ ಪ್ರಜಾಪ್ರಭುತ್ವ. ರಾಜ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿರುವ (ಮುಖ್ಯಮಂತ್ರಿ) ಬಿಪ್ಲಬ್ ದೇಬ್ ಉತ್ತಮ ಕೆಲಸ ಮಾಡಿದ್ದಾರೆ" ಎಂದು ಅಭಿಷೇಕ್ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಧ್ವಜಗಳನ್ನು ಹೊತ್ತ ಕೆಲವರು ಅಭಿಷೇಕ್ ಬ್ಯಾನರ್ಜಿಯ ಬೆಂಗಾವಲಿನ ವಾಹನದ ಮೇಲೆ ಕೋಲಿನಿಂದ ದಾಳಿ ನಡೆಸಿರುವುದು ವೀಡಿಯೊದಲ್ಲಿದೆ.

ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಟಿಎಂಸಿಯ ರಾಜ್ಯಸಭಾ ಸಂಸದ ಡೆರೆಕ್ ಒ 'ಬ್ರಿಯಾನ್ ಅವರು ಹೇಳಿದರು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ತ್ರಿಪುರಾಕ್ಕೆ ಭೇಟಿ ನೀಡಿದ್ದು, ಪಕ್ಷಕ್ಕೆ ರಾಜ್ಯದಲ್ಲಿ ಗಮನಾರ್ಹ ಬೆಂಬಲವಿದೆ ಎಂದು  ಹೇಳಿದ್ದಾರೆ. 2023 ರಲ್ಲಿ ತ್ರಿಪುರಾದಲ್ಲಿ ಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News