ಮುಂಬೈ ವಿಮಾನ ನಿಲ್ದಾಣಕ್ಕೆ ಅದಾನಿ ಹೆಸರು: ಶಿವಸೇನೆ ಕಾರ್ಯಕರ್ತರಿಂದ ಪ್ರತಿಭಟನೆ, ನಾಮಫಲಕಕ್ಕೆ ಹಾನಿ

Update: 2021-08-02 17:25 GMT

ಮುಂಬೈ, ಆ. 2: ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅದಾನಿ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡಿರುವುದನ್ನು ವಿರೋಧಿಸಿ ಶಿವಸೇನೆ ಕಾರ್ಯಕರ್ತರು ಸೋಮವಾರ ‘ಅದಾನಿ ವಿಮಾನ ನಿಲ್ದಾಣ’ ಎಂಬ ಬೋರ್ಡ್ ಗೆ ಹಾನಿ ಮಾಡಿದ್ದಾರೆ. 

ಮಹಾರಾಷ್ಟ್ರದಲ್ಲಿ ಆಡಳಿತದಲ್ಲಿರುವ ಮಹಾ ವಿಕಾಸ ಅಘಾದಿ ಮೈತ್ರಿ ಪಕ್ಷಗಳಲ್ಲಿ ಒಂದಾಗಿರುವ ಶಿವಸೇನೆ ಮುಂಬೈ ವಿಮಾನ ನಿಲ್ದಾಣಕ್ಕೆ ಅದಾನಿ ಹೆಸರು ಇರಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ವರ್ಷ ಜುಲೈಯಲ್ಲಿ ಜಿವಿಕೆ ಸಮೂಹದಿಂದ ಮುಂಬೈ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಸಮೂಹ ತನ್ನ ಕೈಗೆ ತೆಗೆದುಕೊಂಡಿತ್ತು. ಚತ್ರಪತಿ ಶಿವಾಜಿ ಮಹಾರಾಜ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೇ. 74 ಶೇರನ್ನು ಅದಾನಿ ಸಮೂಹದ ತೆಗೆದುಕೊಂಡಿದೆ. ಶೇ. 50.5 ಶೇರನ್ನು ಜಿವಿಕೆ ಸಮೂಹ ಪಡೆದುಕೊಂಡಿದೆ. ಉಳಿದ ಶೇ. 23.53 ಶೇರನ್ನು ಏರ್ಪೋರ್ಟ್ ಕಂಪೆನಿ ಸೌಥ್ ಆಫ್ರಿಕಾ (ಎಸಿಎಸ್ಎ) ಹಾಗೂ ಬಿಡ್ವೆಸ್ಟ್ ಸಮೂಹ ಸೇರಿದಂತೆ ಇತರ ಶೇರುದಾರು ತೆಗೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News