ಪ್ರಧಾನಮಂತ್ರಿ ಕಚೇರಿಯ ಸಲಹೆಗಾರ ಅಮರ್ ಜೀತ್ ಸಿನ್ಹಾ ರಾಜೀನಾಮೆ

Update: 2021-08-03 05:36 GMT
photo: THE HINDU

ಹೊಸದಿಲ್ಲಿ: ಪ್ರಧಾನ ಮಂತ್ರಿ ಕಚೇರಿಯ (ಪಿಎಂಒ) ಸಲಹೆಗಾರ ಅಮರ್‌ಜೀತ್ ಸಿನ್ಹಾ ತಮ್ಮ ಎರಡು ವರ್ಷಗಳ ಅಧಿಕಾರಾವಧಿ ಪೂರ್ಣಗೊಳ್ಳಲು ಇನ್ನೂ 7 ತಿಂಗಳು ಬಾಕಿ ಇರುವಾಗಲೆ  ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಬಿಹಾರದ 1983 ರ ಬ್ಯಾಚ್‌ನ ನಿವೃತ್ತ ಐಎಎಸ್ ಅಧಿಕಾರಿ, ಭಾರತ ಸರಕಾರದ ಕಾರ್ಯದರ್ಶಿಯಾಗಿರುವ ಸಿನ್ಹಾ ಅವರು ಫೆಬ್ರವರಿ 2020 ರಲ್ಲಿ ಪಿಎಂಒಗೆ ನೇಮಕಗೊಂಡಿದ್ದರು. ಸಾಮಾಜಿಕ ವಲಯಕ್ಕೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಅವರು ಹೊಂದಿದ್ದರು.

ಅವರು 2019 ರಲ್ಲಿ ಗ್ರಾಮೀಣ ಅಭಿವೃದ್ಧಿ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು.

ಯಾವುದೇ ಕಾರಣವನ್ನು ನೀಡದೆ ಅವರು  ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಜುಲೈ 31 ಅವರ ಕೊನೆಯ ದಿನವಾಗಿತ್ತು ಉನ್ನತ ಮೂಲಗಳು ಖಚಿತಪಡಿಸಿವೆ.

2019ರ ಸಾರ್ವತ್ರಿಕ ಚುನಾವಣೆಯ ನಂತರ ಅಧಿಕಾರವಧಿ ಪೂರ್ಣಗೊಳ್ಳುವ ಮೊದಲೇ ಪಿಎಂಒಯಿಂದ ನಿರ್ಗಮಿಸಿರುವ ಮೂರನೇ ಉನ್ನತ ಅಧಿಕಾರಿ ಸಿನ್ಹಾ ಅವರಾಗಿದ್ದಾರೆ.

ಈ ಮೊದಲು, ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರ 2019 ರ ಸಾರ್ವತ್ರಿಕ ಚುನಾವಣೆಯ ನಂತರ ರಾಜೀನಾಮೆ ನೀಡಿದ್ದರು. ಈ ವರ್ಷದ ಮಾರ್ಚ್ ನಲ್ಲಿ  ಪ್ರಧಾನ ಸಲಹೆಗಾರ ಪಿ.ಕೆ. ಸಿನ್ಹಾ ಪಿಎಂಒಗೆ ರಾಜೀನಾಮೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News