"ಸಂಸತ್ತನ್ನು ಅವಮಾನಿಸಲಾಗಿದೆ": ವಿಪಕ್ಷಗಳ ವಿರುದ್ಧ ಪ್ರಧಾನಿ ವಾಗ್ದಾಳಿ

Update: 2021-08-03 14:30 GMT

ಹೊಸದಿಲ್ಲಿ:ಸಂಸತ್ತಿನ ಮುಂಗಾರು ಅಧಿವೇಶನ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ಮತ್ತೊಮ್ಮೆ ಆರೋಪಿಸಿದ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬೆಳಗ್ಗೆ ಪ್ರತಿಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ವಿಪಕ್ಷಗಳ ಗದ್ದಲದಿಂದಾಗಿ ಸದನವನ್ನು ಪದೇ ಪದೇ ಮುಂದೂಡುವುದು "ಸಂವಿಧಾನಕ್ಕೆ ... ಪ್ರಜಾಪ್ರಭುತ್ವಕ್ಕೆ ಹಾಗೂ  ಸಾರ್ವಜನಿಕರಿಗೆ ಮಾಡಿದ ಅವಮಾನ" ಎಂದು ಪ್ರಧಾನಿ ಹೇಳಿದರು.

"ಎರಡೂ ಸದನಗಳಲ್ಲಿ ಪ್ರತಿಪಕ್ಷಗಳ ನಡವಳಿಕೆಗಳಿಂದ ಸಂಸತ್ತನ್ನು ಅವಮಾನಿಸಲಾಗುತ್ತಿದೆ. ಕಾಗದವನ್ನು ಕಿತ್ತುಕೊಂಡು ಅದನ್ನು ಹರಿದು ಹಾಕಿದ ವ್ಯಕ್ತಿಯು ತನ್ನ ಕೃತ್ಯಗಳ ಬಗ್ಗೆ ಪಶ್ಚಾತ್ತಾಪಪಡುವುದಿಲ್ಲ" ಎಂದು ಇಂದು ನಡೆದ ಸಭೆಯಲ್ಲಿ ಬಿಜೆಪಿ ಸಂಸದರನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ಹೇಳಿದರು.

ಪೆಗಾಸಸ್ ಹಗರಣದ ಬಗ್ಗೆ ಹೇಳಿಕೆ ನೀಡಲು ಮುಂದಾಗಿದ್ದಾಗ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರಿಂದ ಕಾಗದಗಳನ್ನು ಕಸಿದುಕೊಂಡ ತೃಣಮೂಲ ಕಾಂಗ್ರೆಸ್ ಸಂಸದ ಸಂತನು ಸೇನ್  ಅವರ ವರ್ತನೆಯನ್ನು ಪ್ರಧಾನಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News