ಒಲಿಂಪಿಕ್ಸ್ ಪುರುಷರ ಶಾಟ್ ಪುಟ್: ಫೈನಲ್ ತಲುಪಲು ತಜಿಂದರ್ ಸಿಂಗ್ ವಿಫಲ
Update: 2021-08-03 17:17 IST
ಟೋಕಿಯೊ: ಭಾರತದ ತಜಿಂದರ್‌ಪಾಲ್ ಸಿಂಗ್ ತೂರ್ ಟೋಕಿಯೊ ಒಲಿಂಪಿಕ್ಸ್ ನ ಪುರುಷರ ಶಾಟ್ ಪುಟ್ ಅರ್ಹತಾ ಸುತ್ತಿನಲ್ಲಿ ಕಳಪೆ ಪ್ರದರ್ಶನ ನೀಡಿದರು. ಈ ಮೂಲಕ ಫೈನಲ್ ತಲುಪುವುದಕ್ಕೆ ವಿಫಲರಾದರು.
ಮಂಗಳವಾರ ನಡೆದ 'ಎ' ಗುಂಪಿನ ಅರ್ಹತಾ ಸುತ್ತಿನ ಮೊದಲ ಪ್ರಯತ್ನದಲ್ಲಿ 19.99 ಮೀ. ಅವರ ಅತ್ಯುತ್ತಮ ಥ್ರೋ ಆಗಿತ್ತು. ಸಿಂಗ್ ತನ್ನ ಮುಂದಿನ ಎರಡು ಪ್ರಯತ್ನಗಳಲ್ಲಿ ಎರಡು ಬಾರಿ ಫೌಲ್ ಥ್ರೋಗಳನ್ನು ಎಸೆದರು. ತಜಿಂದರ್ ಸ್ಪರ್ಧಿಸುತ್ತಿರುವ ಗುಂಪಿನಲ್ಲಿ 16 ಸ್ಪರ್ಧಾಳುಗಳ ಪೈಕಿ 13 ನೇ ಸ್ಥಾನ ಪಡೆದರು.
'ಬಿ' ಗುಂಪಿನಲ್ಲಿ ಇನ್ನೂ 15 ಶಾಟ್ ಪುಟ್ ಪಟುಗಳು ಫೈನಲ್‌ನಲ್ಲಿ ಸ್ಥಾನಕ್ಕಾಗಿ ಸ್ಪರ್ಧಿಸುತ್ತಾರೆ.
'