ಹ್ಯಾಟ್ರಿಕ್ ಚಿನ್ನ ಜಯಿಸಿ ಇತಿಹಾಸ ಬರೆದ ಹ್ಯಾಮರ್ ರಾಣಿ ಅನಿಟಾ

Update: 2021-08-03 17:52 GMT
photo :twitter

ಟೋಕಿಯೊ, ಆ.3: ಪೊಲೆಂಡ್ ನ ಅನಿಟಾ ವ್ಲೊಡಾರ್ಕ್ ಜಿಕ್ ಅವರು ಒಲಿಂಪಿಕ್ಸ್ ನ ಟ್ರ್ಯಾಕ್ ಆ್ಯಂಡ್ ಫೀಲ್ಡ್ ನ ಒಂದೇ ಸ್ಪರ್ಧೆಯಲ್ಲಿ ಸತತ ಮೂರನೇ ಬಾರಿ ಚಿನ್ನ ಗೆದ್ದ ಮೊದಲ ಮಹಿಳಾ ಅಥ್ಲೀಟ್ ಎನಿಸಿಕೊಂಡರು.

ಅನಿಟಾ ಮಂಗಳವಾರ ನಡೆದ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ನಿರಾಯಾಸವಾಗಿ ಸ್ವರ್ಣ ವಿಜೇತರಾದರು.

35 ವರ್ಷದ ಈ ಅಥ್ಲೀಟ್ 2012ರ ಲಂಡನ್ ಹಾಗೂ 2016ರ ರಿಯೋ ಗೇಮ್ಸ್ ನಲ್ಲೂ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದರು. ಮಂಗಳವಾರ  78.48 ಮೀ. ಗಳ ಅತ್ಯುತ್ತಮ ಥ್ರೋ ಮೂಲಕ ಹ್ಯಾಟ್ರಿಕ್ ಸಾಧನೆ ಪೂರೈಸಿದರು. ತನ್ನ ಎದುರಾಳಿಗಿಂತ 1.45 ಮೀ.ಗಳ ದೂರಕ್ಕೆ ಹ್ಯಾಮರ್ ಎಸೆದ ಕಾರಣ ಚಿನ್ನ ಪದಕ ಗೆಲ್ಲುವುದು ಅವರಿಗೆ ಪ್ರಯಾಸ ವೆನಿಸಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News