ಒಂದು ದಿನದ ಮಟ್ಟಿಗೆ ತೃಣಮೂಲದ ಆರು ರಾಜ್ಯಸಭಾ ಸದಸ್ಯರ ಅಮಾನತು

Update: 2021-08-04 09:01 GMT
photo: facebook 

ಹೊಸದಿಲ್ಲಿ: ಪೆಗಾಸಸ್ ಪ್ರಕರಣದ ಕುರಿತು ಪ್ರತಿಭಟಿಸುತ್ತಿರುವಾಗ ಭಿತ್ತಿಪತ್ರ ಗಳನ್ನು ಪ್ರದರ್ಶಿಸುತ್ತಾ ಸದನದ ಬಾವಿಗೆ ಇಳಿದಿದ್ದ ತೃಣಮೂಲ ಕಾಂಗ್ರೆಸ್ ನ  ಆರು ಸಂಸದರನ್ನು ವ್ಯತಿರಿಕ್ತ ನಡವಳಿಕೆಯ ಕಾರಣಕ್ಕೆ ರಾಜ್ಯಸಭೆಯಿಂದ ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಲಾಗಿದೆ.

ರಾಜ್ಯ ಸಭಾ ಸದಸ್ಯರುಗಳಾದ  ಡೋಲಾ ಸೇನ್, ನದಿಮುಲ್ ಹಕ್, ಅಬಿರ್ ರಂಜನ್ ಬಿಸ್ವಾಸ್, ಶಾಂತ ಚೆತ್ರಿ, ಅರ್ಪಿತಾ ಘೋಷ್ ಹಾಗೂ  ಮೌಸಮ್ ನೂರ್ ಅಮಾನತುಗೊಂಡವರು. ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ತಮ್ಮ ಸ್ಥಾನಗಳಿಗೆ ಹಿಂತಿರುಗಲು ಸದಸ್ಯರನ್ನು ಮೊದಲು ಕೇಳಿಕೊಂಡರು ಹಾಗೂ  ಭಿತ್ತಿಪತ್ರಗಳನ್ನು ಪ್ರದರ್ಶಿಸಿದ್ದಕ್ಕೆ ನಿಯಮ 255 ಅನ್ನು ವಿಧಿಸುವ   ಎಚ್ಚರಿಕೆ ನೀಡಿದರು.

ತೃಣಮೂಲ ಸದಸ್ಯರನ್ನು ಒಳಗೊಂಡಂತೆ ವಿರೋಧ ಪಕ್ಷದ ನಾಯಕರು, ಭಿತ್ತಿಪತ್ರಗಳನ್ನು ಹಿಡಿದುಕೊಂಡು ಸದನದ ಬಾವಿಗೆ ಇಳಿದರು. ವಿರೋಧ ಪಕ್ಷದ ನಾಯಕರು, ಸರಕಾರವನ್ನ ಟೀಕಿಸುವವರು ಹಾಗೂ ಪತ್ರಕರ್ತರ ಮೇಲೆ ಗೂಢಚರ್ಯೆ ನಡೆಸಲು ಇಸ್ರೇಲ್ ತಯಾರಿಸಿದ ಸ್ಪೈವೇರ್ ಪೆಗಾಸಸ್ ಬಳಸಲಾಗಿರುವ ವಿಚಾರದ ಕುರಿತು ಚರ್ಚೆ ನಡೆಸುವಂತೆ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News