ಪೆಗಾಸಸ್ ಪ್ರಕರಣ: ತನಿಖೆಗೆ ಒತ್ತಾಯಿಸಿದ ಎನ್ ಡಿಎನ ಮತ್ತೊಂದು ಮೈತ್ರಿ ಪಕ್ಷ

Update: 2021-08-04 08:57 GMT

ಪಾಟ್ನಾ: ಬಿಹಾರದ ಎನ್‌ಡಿಎಯ ಮತ್ತೊಂದು ಮೈತ್ರಿ ಪಕ್ಷದ ನಾಯಕ ಜಿತನ್ ರಾಮ್ ಮಾಂಜಿ ಅವರು ನಿತೀಶ್ ಕುಮಾರ್ ಅವರ ಹಾದಿಯನ್ನು ಅನುಸರಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿರುವ ಪೆಗಾಸಸ್ ಗೂಢಚರ್ಯೆ ಪ್ರಕರಣದ ತನಿಖೆಗೆ ಒತ್ತಾಯಿಸಿದ್ದಾರೆ.

ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಹಿಂದೂಸ್ತಾನಿ ಅವಾಮಿ ಮೋರ್ಚಾ (ಎಚ್ ಎ ಎಂ) ನ ಸ್ಥಾಪಕ ಮುಖ್ಯಸ್ಥರಾದ ಜಿತನ್ ರಾಮ್,  ಪ್ರತಿಪಕ್ಷಗಳು ತನಿಖೆಗೆ ಒತ್ತಾಯಿಸುತ್ತಿದ್ದರೆ ಹಾಗೂ  ಸಂಸತ್ ಅಧಿವೇಶನಗಳ ಮೇಲೆ ಇದು ಪರಿಣಾಮ ಬೀರುತ್ತಿದ್ದರೆ, ಈ ವಿಷಯವನ್ನು ತನಿಖೆ ಮಾಡಬೇಕು. "ಪೆಗಾಸಸ್ ಸ್ನೂಪಿಂಗ್ ಪ್ರಕರಣದ ಸತ್ಯಗಳನ್ನು ಹೊರಹಾಕಲು ತನಿಖೆ ನಡೆಸಬೇಕು ಹಾಗೂ  ಯಾರು ಬೇಹುಗಾರಿಕೆ ನಡೆಸಿದ್ದಾರೆ ಎಂದು ಗೊತ್ತಾಗಬೇಕು " ಎಂದು ಹೇಳಿದರು.

ಬಿಹಾರದ ಎನ್‌ಡಿಎ ಸರಕಾರದ ಭಾಗವಾಗಿದ್ದರೂ, ಲಸಿಕೆ ಪ್ರಮಾಣಪತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವನ್ನು ಬಳಸುವುದಕ್ಕೆ ಜಿತನ್ ರಾಮ್ ಈ ಹಿಂದೆ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು.

ಜಾತಿ ಗಣತಿ ಹಾಗೂ ಪೆಗಾಸಸ್ ಪ್ರಕರಣದ ಬಗ್ಗೆ ನಿತೀಶ್ ಕುಮಾರ್ ಹಾಗೂ ಜಿತನ್ ರಾಮ್  ನೀಡಿದ ಹೇಳಿಕೆಗಳು ಬಿಹಾರದಲ್ಲಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ರಾಜ್ಯ ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News