2019ರಲ್ಲಿ ಯುಎಪಿಎ ಅನ್ವಯ 1948 ಮಂದಿ ಬಂಧನ, 34 ಮಂದಿ ಅಪರಾಧಿಗಳೆಂದು ಘೋಷಿಸಿದ ನ್ಯಾಯಾಲಯಗಳು

Update: 2021-08-04 12:00 GMT

ಹೊಸದಿಲ್ಲಿ:  ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯುರೋ (ಎನ್‍ಸಿಆರ್‍ಬಿ) ಅಂಕಿಅಂಶಗಳ ಪ್ರಕಾರ ದೇಶದಲ್ಲಿ 2019ರಲ್ಲಿ  ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆ  ಅನ್ವಯ 1948 ಮಂದಿಯನ್ನು ಬಂಧಿಸಲಾಗಿತ್ತು ಹಾಗೂ 34 ಮಂದಿ ಆ ವರ್ಷ ಈ ಕಾಯಿದೆಯಡಿಯಲ್ಲಿ ಅಪರಾಧಿಗಳು ಎಂದು ಘೋಷಿಸಲ್ಪಟ್ಟಿದ್ದಾರೆ ಎಂದು ಗೃಹ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು ಇಂದು ಡಿಎಂಕೆ ಸಂಸದ ತಿರುಚ್ಚಿ ಶಿವ ಅವರ ಪ್ರಶ್ನೆಗೆ ರಾಜ್ಯಸಭೆಯಲ್ಲಿ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.

"ಎನ್‍ಸಿಆರ್‍ಬಿ ಆಯಾಯ ರಾಜ್ಯಗಳಿಂದ ಸಂಗ್ರಹಿಸಿದ ಅಂಕಿಅಂಶಗಳನ್ನು ತನ್ನ ವಾರ್ಷಿಕ ಪ್ರಕಟಣೆ ʼಕ್ರೈಂ ಇನ್ ಇಂಡಿಯಾʼ ದಲ್ಲಿ ಪ್ರಕಟಿಸುತ್ತದೆ. ಬ್ಯುರೋ ಈ ಹಿಂದೆ 2019ರಲ್ಲಿ ತನ್ನ ವರದಿ ಹೊರತಂದಿತ್ತು" ಎಂದು ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News