ಕರಾವಳಿಯಲ್ಲಿ 3 ದಿನ ಭಾರೀ ಮಳೆಯ ಮುನ್ನೆಚ್ಚರಿಕೆ

Update: 2021-08-04 16:05 GMT

ಉಡುಪಿ, ಆ.4: ರಾಜ್ಯದ ಕರಾವಳಿಯಲ್ಲಿ ಆ.5ರಿಂದ ಮೂರು ದಿನಗಳ ಕಾಲ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಬೆಂಗಳೂರಿನ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಆ.5ರಿಂದ 7ರವರೆಗೆ ಕರಾವಳಿಯ ಅನೇಕ ಕಡೆಗಳಲ್ಲಿ 64.5ಮಿ.ಮೀಗೂ ಅಧಿಕ ಮಳೆ ಬೀಳುವ ನಿರೀಕ್ಷೆ ಇದೆ ಎಂದು ಹವಾಮಾನ ವರದಿಯಲ್ಲಿ ತಿಳಿಸಲಾಗಿದೆ.

ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 88.8ಮಿ.ಮೀ. ಮಳೆ ಸುರಿ ದಿದೆ ಎಂದು ವರದಿಗಳು ತಿಳಿಸಿವೆ. ಉಡುಪಿಯಲ್ಲಿ 62.6ಮಿ.ಮೀ., ಬ್ರಹ್ಮಾವರ 82.1, ಕಾಪು 30.7, ಕುಂದಾಪುರ 103.9, ಬೈಂದೂರು 129.8, ಕಾರ್ಕಳ 58.0 ಹಾಗೂ ಹೆಬ್ರಿಯಲ್ಲಿ 107.3ಮಿ.ಮೀ. ಮಳೆ ಬಿದ್ದಿದೆ.

ಇದೇ ಅವಧಿಯಲ್ಲಿ ಬೈಂದೂರು ತಾಲೂಕು ಶಿರೂರು ಗ್ರಾಮದ ಸೀತಾರಾಮ ಆಚಾರಿ ಎಂಬವರ ಮನೆ ಮೇಲೆ ಮರಬಿದ್ದು 50ಸಾವಿರ ರೂ. ಹಾಗೂ ಯಳಜಿತ್ ಗ್ರಾಮದ ಅಬ್ಬಕ್ಕ ದೇವಾಡಿಗರ ಮನೆಯ ಮಾಡಿನ ಹೆಂಚು ಗಾಳಿಯಿಂದ ಹಾರಿಹೋಗಿ 45,000ರೂ.ನಷ್ಟ ಉಂಟಾಗಿದೆ ಎಂದೂ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News