ದೇಶದಲ್ಲಿ ಮೂರು ವರ್ಷಗಳಲ್ಲಿ 230 ರಾಜಕೀಯ ಹತ್ಯೆ: ಲೋಕಸಭೆಗೆ ತಿಳಿಸಿದ ಕೇಂದ್ರ

Update: 2021-08-04 17:43 GMT

ಹೊಸದಿಲ್ಲಿ, ಆ.4: 2017 ಹಾಗೂ 2019ರ ನಡುವೆ ಒಟ್ಟು 230 ಮಂದಿ ರಾಜಕೀಯ ಕಾರಣಗಳಿಗಾಗಿ ಹತ್ಯೆಯಾಗಿದ್ದಾರೆ ಎಂದು ಕೇಂದ್ರ ಸಹಾಯಕ ಗೃಹ ಸಚಿವ ನಿತ್ಯಾನಂದ ರಾಯ್ ಅವರು ಮಂಗಳವಾರ ಲೋಕಸಭೆಗೆ ತಿಳಿಸಿದ್ದಾರೆ. ರಾಜಕೀಯ ಕಾರಣಗಳಿಂದಾಗಿ ಹತ್ಯೆಯಾದವರಲ್ಲಿ 29 ಮಂದಿ ಜಾರ್ಖಂಡ್, 27 ಮಂದಿ ಪಶ್ಚಿಮಬಂಗಾಳ ಹಾಗೂ 26 ಮಂದಿ ಬಿಹಾರದವರೆಂದು ಅವರು ತಿಳಿಸಿದರು.

2017ರಲ್ಲಿ 99 ಮಂದಿ, 2018ರಲ್ಲಿ 59 ಮಂದಿ ಹಾಗೂ 2019ರಲ್ಲಿ 72 ಮಂದಿ ರಾಜಕೀಯ ಕಾರಣಗಳಿಂದಾಗಿ ಕೊಲೆಯಾಗಿದ್ದಾರೆಂದು ಅವರು ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು ಹಾಗೂ ಈ ಬಗ್ಗೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ ದತ್ತಾಂಶಗಳನ್ನು ಸಂಗ್ರಹಿಸುತ್ತಿದೆಯೆಂದು ಸಚಿವರು ತಿಳಿಸಿದರು.

2017ರಿಂದ 2019ರವರೆಗೆ ಕರ್ನಾಟಕದಲ್ಲಿ ಒಟ್ಟು 24 ರಾಜಕೀಯ ಹತ್ಯೆಗಳು ನಡೆದಿದ್ದು, ಕೇರಳ ಹಾಗೂ ಮಹಾರಾಷ್ಟ್ರಗಳಲ್ಲಿ ತಲಾ 15 ಪ್ರಕರಣಗಳು ವರದಿಯಾಗಿವೆ ಎಂದು ನಿತ್ಯಾನಂದ ರಾಯ್ ಹೇಳಿದರು.

2018 ಹಾಗೂ 2019ರಲ್ಲಿ ಪಶ್ಚಿಮಬಂಗಾಳದಲ್ಲಿ ಗರಿಷ್ಠ ಸಂಖ್ಯೆಯ ರಾಜಕೀಯ ಕಾರಣದ ಕಗ್ಗೊಲೆಗಳು ನಡೆದಿದ್ದು, ಈ ಎರಡು ವರ್ಷಗಳಲ್ಲಿ 13 ಮಂದಿ ಹತ್ಯೆಯಾಗಿದ್ದಾರೆಂದು ಅವರು ಹೇಳಿದರು.

2017ರಲ್ಲಿ ಜಾರ್ಖಂಡ್ನಲ್ಲಿ ದೇಶದಲ್ಲೇ ಗರಿಷ್ಠ ಸಂಖ್ಯೆಯ ರಾಜಕೀಯ ಹತ್ಯೆಗಳಾಗಿದ್ದು, 42 ಮಂದಿ ಕಗ್ಗೊಲೆಯಾಗಿದ್ದಾರೆ ಎಂದು ನಿತ್ಯಾನಂದ ರಾಯ್ ಸದನಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News