ಉಪ್ಪಿನಂಗಡಿ: ಹಾಜಿ ಅಬೂಬಕರ್ ಆಕಿರೆ ನಿಧ‌ನ

Update: 2021-08-05 09:27 GMT

ಬಂಟ್ವಾಳ : ಉದ್ಯಮಿ, ಮಾಜಿ ಗುತ್ತಿಗೆದಾರ ಉಪ್ಪಿನಂಗಡಿ ನಿವಾಸಿ ಹಾಜಿ ಅಬೂಬಕರ್ ಆಕಿರೆ (94) ಅವರು ಗುರುವಾರ ಸ್ವಗೃಹದಲ್ಲಿ ನಿಧನರಾದರು.

ಟಿಂಬರ್ ಉದ್ಯಮ ಮತ್ತು ಪಿಡಬ್ಲ್ಯೂಡಿ ಗುತ್ತಿಗೆದಾರರಾಗಿ ಹೆಸರುವಾಸಿಯಾಗಿದ್ದ ಹಾಜಿ ಅಬೂಬಕರ್ ಆಕಿರೆ ಅವರು ಕೃಷಿಕರೂ ಆಗಿದ್ದರು. ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲೂ ಸಕ್ರಿಯವಾಗಿದ್ದರು. ಉಪ್ಪಿನಂಗಡಿ ಮಾಲಿಕುದ್ದೀನಾರ್ ಜುಮಾ ಮಸೀದಿಯ ಅಧ್ಯಕ್ಷ ಹಾಗೂ ಆಡಳಿತ ಮಂಡಳಿಯಲ್ಲಿ ವಿವಿಧ ಹುದ್ದೆಗಳನ್ನು ಅವರು ನಿರ್ವಹಿಸಿದ್ದಾರೆ.

ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ್ದು, ಇತ್ತೀಚಿಗೆ ಅವರು ಮನೆಯಲ್ಲೇ ಇದ್ದು ಇಂದು ಬೆಳಗ್ಗೆ ನಿಧನರಾದರು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News