ಸಿಬಿಎಸ್‌ಸಿ ಪರೀಕ್ಷೆ : ಮಾಧವಕೃಪಾ ಮಣಿಪಾಲಕ್ಕೆ ಶೇ.100 ಫಲಿತಾಂಶ

Update: 2021-08-05 12:52 GMT

ಮಣಿಪಾಲ, ಆ.5: ಇತ್ತೀಚೆಗೆ ನಡೆದ ಈ ವರ್ಷದ 10ನೇ ತರಗತಿ ಹಾಗೂ 12ನೇ ತರಗತಿಗಳ ಸಿಬಿಎಸ್‌ಸಿ ಪರೀಕ್ಷೆಯಲ್ಲಿ ಮಣಿಪಾಲದ ಮಾಧವಕೃಪಾ ಶಾಲೆಯ ವಿದ್ಯಾರ್ಥಿಗಳು ಶೇ.100ರಷ್ಟು ಫಲಿತಾಂಶವನ್ನು ಪಡೆದಿದ್ದಾರೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಸಂಚಾಲಕರಾದ ಪಿ.ಜಿ.ಪಂಡಿತ್ ತಿಳಿಸಿದ್ದಾರೆ.

ಸಿಬಿಎಸ್‌ಸಿ ಹನ್ನೆರಡನೇ ತರಗತಿಯಲ್ಲೂ ಪರೀಕ್ಷೆ ಬರೆದ ಎಲ್ಲಾ 87 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು ಶೇ.ನೂರು ಫಲಿತಾಂಶ ಗಳಿಸಿದೆ. ಪರೀಕ್ಷೆ ಬರೆದ ಎಲ್ಲಾ 87 ವಿದ್ಯಾರ್ಥಿಗಳೂ -ಪಿಸಿಎಂಬಿ: 43, ಪಿಸಿಎಂಸಿ: 24 ಮತ್ತು ವಾಣಿಜ್ಯವಿಭಾಗ:20) ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ ರಾಗಿದ್ದಾರೆ.

ಈ ಪೈಕಿ 34 ವಿದ್ಯಾರ್ಥಿಗಳು ಶೇ.90ಕ್ಕಿಂತ ಅಧಿಕ ಅಂಕಗಳನ್ನು, 36 ವಿದ್ಯಾರ್ಥಿಗಳು ಶೇ.80ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ್ದಾರೆ ಎಂದು ಪ್ರಾಂಶುಪಾಲೆ ಜೆಸ್ಸಿ ಆಂಡ್ರುವ್ಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News