ಮಹಿಳೆಯರಲ್ಲಿ ನಾಯಕತ್ವ ತರಬೇತಿ ಕಾರ್ಯಾಗಾರ

Update: 2021-08-05 13:49 GMT

ಮಲ್ಪೆ, ಆ.5: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಮಲ್ಪೆ ವಲಯದ 14 ಒಕ್ಕೂಟಗಳ ಪದಾಧಿಕಾರಿಗಳಿಗೆ ನಾಯಕತ್ವ ತರಬೇತಿ ಕಾರ್ಯಗಾರವನ್ನು ತೆಂಕನಿಡಿಯೂರು ಸಮುದಾಯ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಲ್ಪೆ ಪೋಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ಸಕ್ತಿವೇಲು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಹಿಳೆಯರಲ್ಲಿ ನಾಯಕತ್ವ ಗುಣ ಬೆಳೆದಿದೆ. ಇಂಥ ತರಬೇತಿ ಕಾರ್ಯಕ್ರಮಗಳು ಸಮಾಜದ ಎಲ್ಲಾ ಮಹಿಳೆಯರಲ್ಲಿ ನಾಯಕತ್ವ ಗುಣ ವನ್ನು ಇನ್ನಷ್ಟು ಬೆ ಳೆಸಲು ಸಹಕಾರಿಯಾಗಲಿದೆ ಎಂದರು.

ಜನರು ಪೋಲೀಸ್ ಇಲಾಖೆಯ ಮೇಲೆ ಇರುವ ಭಯದ ವಾತಾವರಣ ಹೋಗಿ, ಸಮಾಜದ ಒಳಿತಿಗೋಸ್ಕರ ಇಲಾಖೆಯ ಸೌಲಭ್ಯವನ್ನು ಬಳಸಿ ಕೊಳ್ಳುವ ಬಗ್ಗೆಯೂ ಸಕ್ತಿವೇಲು ಮಾಹಿತಿಗಳನ್ನು ನೀಡಿದರು.

ತಾಲೂಕಿನ ಯೋಜನಾಧಿಕಾರಿ ರೋಹಿತ್ ಎಚ್. ಮಾತನಾಡಿ ಪದಾಧಿಕಾರಿ ಗಳು ಯೋಜನೆಯ ಶಕ್ತಿಯಾಗಿ, ನಮ್ಮ ಒಕ್ಕೂಟದ ಸಂಘಗಳ ಬಲವರ್ಧನೆಗೆ ಸೇವಾಮನೋಭಾವನೆುಂದ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ 2020-21ನೇ ಸಾಲಿನ ಸಾಧಕ ಒಕ್ಕೂಟಗಳಿಗೆ ಅಭಿನಂದನಾ ಪತ್ರಗಳನ್ನು ವಿತರಿಸಲಾಯಿತು. ಉಡುಪಿ ವಲಯ ಮೇಲ್ವಿಚಾರಕ ಭಾಸ್ಕರ, ತಾಲೂಕಿನ ಆಂತರಿಕ ಲೆಕ್ಕ ಪರಿಶೋಧಕಿ ಸರಸ್ವತಿ, ವಲಯದ ಸೇವಾಪ್ರತಿನಿಧಿಗಳಾದ ಸಾವಿತ್ರಿ, ಉಮಾ, ಪೂರ್ಣಿಮಾ, ಶಾಲಿನಿ, ಸವಿತಾ ಉಪಸ್ಥಿತರಿದ್ದರು. ವಲಯ ಅಧ್ಯಕ್ಷೆ ಆಶಾಲತಾ ಅಧ್ಯಕ್ಷತೆ ವಹಿಸಿದ್ದರು. ವಲಯದ ಮೇಲ್ವಿಚಾರಕಿ ಮೂಕಾಂಬಿಕಾ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಉಮಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News