ಜಾತಿ ಗಣತಿ ಕುರಿತು ಚರ್ಚೆಗೆ ಪ್ರಧಾನಿ ಭೇಟಿಗೆ ಬಯಸಿದ್ದೇನೆ, ಅವರಿಂದ ಪ್ರತಿಕ್ರಿಯೆ ಬಂದಿಲ್ಲ: ನಿತೀಶ್ ಕುಮಾರ್

Update: 2021-08-05 18:18 GMT

ಹೊಸದಿಲ್ಲಿ: ರಾಜ್ಯದಲ್ಲಿ ಜಾತಿ ಆಧಾರಿತ ಜನಗಣತಿ ವಿಷಯದ ಕುರಿತು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಅಪಾಯಿಂಟ್ಮೆಂಟ್ ಕೋರಿದ್ದೇನೆ. ಆದರೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ನಿತೀಶ್ ಕುಮಾರ್ ಅವರ  ಸಂಯುಕ್ತ ಜನತಾದಳ (ಜೆಡಿಯು)  ಸಂಸದರಿಗೆ ಈ ಹಿಂದೆ ಪ್ರಧಾನಿ ಮೋದಿಯವರ ಭೇಟಿಯನ್ನು ನಿರಾಕರಿಸಲಾಗಿತ್ತು. ಪ್ರಧಾನಿ ಬದಲಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಬೇಕೆಂದು ಹೇಳಲಾಗಿತ್ತು.

"ಜಾತಿ ಗಣತಿ ಮಾಡುವುದು, ಬಿಡುವುದು ಕೇಂದ್ರಕ್ಕೆ ಬಿಟ್ಟ ವಿಚಾರ ... ನಮ್ಮ ಅಭಿಪ್ರಾಯಗಳನ್ನು ತಿಳಿಸುವುದು ನಮ್ಮ ಕೆಲಸ. ಒಂದು ಜಾತಿಯವರು ಇಷ್ಟಪಡುತ್ತಾರೆ ಹಾಗೂ  ಇನ್ನೊಂದು ಜಾತಿಯವರು ಇಷ್ಟಪಡುವುದಿಲ್ಲ ಎಂದು ಭಾವಿಸಬೇಡಿ ... ಇದು ಎಲ್ಲರ ಹಿತಾಸಕ್ತಿ" ಎಂದು ಅವರು ಹೇಳಿದರು.

"ಸಮಾಜದಲ್ಲಿ ಯಾವುದೇ ಉದ್ವಿಗ್ನತೆ ಸೃಷ್ಟಿಯಾಗುವುದಿಲ್ಲ. ಸಂತೋಷ ಇರುತ್ತದೆ ... ಪ್ರತಿ ಸ್ತರದ ಜನರು ಯೋಜನೆಗಳಿಂದ ಪ್ರಯೋಜನ ಪಡೆಯುತ್ತಾರೆ. ಅಂತಹ ಜನಗಣತಿ ಬ್ರಿಟಿಷ್ ಆಳ್ವಿಕೆಯಲ್ಲೂ ಸಂಭವಿಸಿದೆ. ಎಂದು ಅವರು ಸುದ್ದಿಗಾರರಿಗೆ ಹೇಳಿದರು,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News