ಉತ್ತರಪ್ರದೇಶ: 686 ಕೋ. ರೂ. ಮೌಲ್ಯದ ಮಾದಕ ದ್ರವ್ಯ ವಶ
Update: 2021-08-05 23:48 IST
ಮಹಾರಾಜ್‌ಗಂಜ್, ಆ. 5: ಮಹಾರಾಜ್‌ಗಂಜ್ ಪ್ರದೇಶದ ತೂತಿಬಾರಿ ಪ್ರದೇಶದಲ್ಲಿರುವ ವ್ಯಕ್ತಿಯೋರ್ವನಿಗೆ ಸೇರಿದ ಮನೆ ಹಾಗೂ ಗೋದಾಮಿನ ಮೇಲೆ ದಾಳಿ ನಡೆಸಿ 686 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಆರೋಪಿ ರಮೇಶ್ ಗುಪ್ತಾನನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ಗೋವಿಂದ್ ಗುಪ್ತಾ ಪರಾರಿಯಾಗಿದ್ದಾನೆ.
ಸ್ಥಳೀಯ ಪೊಲೀಸ್, ಆಡಳಿತ ಹಾಗೂ ಶಶಸ್ತ್ರ ಸಿಮಾ ಬಲ (ಎಸ್‌ಎಸ್‌ಬಿ) ಜಂಟಿಯಾಗಿ ಎರಡೂ ಕಡೆಗಳಲ್ಲಿ ದಾಳಿ ನಡೆಸಿತು ಹಾಗೂ ಮಾದಕ ದ್ರವ್ಯವವನ್ನು ವಶಪಡಿಸಿಕೊಂಡಿತು ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯ ವ್ಯಕ್ತಪಡಿಸಿರುವ ಎಸ್‌ಎಸ್‌ಬಿ ಕಮಾಂಡೆಂಟ್ ಮನೋಜ್ ಸಿಂಗ್, ‘‘ಸ್ಥಳೀಯ ಪೊಲೀಸ್ ಹಾಗೂ ಡ್ರಗ್ ಇನ್ಸ್‌ಪೆಕ್ಟರ್ ಅವರು ಜಂಟಿಯಾಗಿ ದಾಳಿ ನಡೆಸಿ 686 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ’’ ಎಂದು ತಿಳಿಸಿದ್ದಾರೆ.