ಒಬಿಸಿ ಜನಗಣತಿ ನಡೆಸಲು ರಚನಾತ್ಮಕ ಕ್ರಮ ತೆಗೆದುಕೊಂಡರೆ ಕೇಂದ್ರಕ್ಕೆ ಬೆಂಬಲ: ಮಾಯಾವತಿ
Update: 2021-08-06 14:10 IST
ಲಕ್ನೋ: ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಜನಗಣತಿ ನಡೆಸಲು ರಚನಾತ್ಮಕ ಕ್ರಮಗಳನ್ನು ತೆಗೆದುಕೊಂಡರೆ ಸಂಸತ್ತಿನಲ್ಲಿ ಹಾಗೂ ಅದರ ಹೊರಗೆ ಕೇಂದ್ರ ಸರಕಾರವನ್ನು ತನ್ನ ಪಕ್ಷ ಬೆಂಬಲಿಸುತ್ತದೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮಾತ್ರ ನಡೆಸಲು ಕೇಂದ್ರ ಸರಕಾರವು ಪ್ರಸ್ತಾಪಿಸಿರುವ ಜಾತಿ ಆಧಾರಿತ ಜನಗಣತಿಯ ಸಮಸ್ಯೆಯನ್ನು ಚರ್ಚಿಸಲು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಅಪಾಯಿಂಟ್‌ಮೆಂಟ್ ಕೋರಿದ ಬಳಿಕ ಮಾಯಾವತಿ ಹೇಳಿಕೆ ಬಂದಿದೆ.
"ಬಿಎಸ್‌ಪಿ ದೇಶದಲ್ಲಿ ಒಬಿಸಿಗಳ ಜನಗಣತಿಗಾಗಿ ಒತ್ತಾಯಿಸುತ್ತಿದೆ. ಕೇಂದ್ರ ಸರಕಾರ ಈ ದಿಸೆಯಲ್ಲಿ ಯಾವುದೇ ಸಕಾರಾತ್ಮಕ ಹೆಜ್ಜೆ ಇಟ್ಟರೆ, ಬಿಎಸ್‌ಪಿ ಸಂಸತ್ತಿನ ಒಳಗೆ ಹಾಗೂ ಹೊರಗೆ ಬೆಂಬಲಿಸುತ್ತದೆ" ಎಂದು ಮಾಯಾವತಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.