ದಿಲ್ಲಿ:ಜಂತರ್ ಮಂತರ್ ನಲ್ಲಿ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ, ಇತರ ವಿಪಕ್ಷ ನಾಯಕರು

Update: 2021-08-06 09:04 GMT

ಹೊಸದಿಲ್ಲಿ: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಆಂದೋಲನ ನಡೆಸುತ್ತಿರುವ ರೈತರಿಗೆ ಬೆಂಬಲವನ್ನು ಒತ್ತಿ ಹೇಳಲು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹಾಗೂ  14 ವಿರೋಧ ಪಕ್ಷಗಳ ನಾಯಕರು ಶುಕ್ರವಾರ ದಿಲ್ಲಿಯ ಜಂತರ್ ಮಂತರ್ ನಲ್ಲಿ ಜಂಟಿ ಪ್ರತಿಭಟನೆ ನಡೆಸಿದರು.

ರಾಹುಲ್ ಗಾಂಧಿ ಹಾಗೂ  ಇತರ ನಾಯಕರು ಗುಂಪಿನೊಂದಿಗೆ ನಿಂತಿದ್ದು, ಕೋವಿಡ್ ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ಅವರೆಲ್ಲರೂ ಮಾಸ್ಕ್ ಗಳನ್ನು ಧರಿಸಿದ್ದರು ಮತ್ತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಒಂದು ಹಂತದಲ್ಲಿ ರಾಹುಲ್ ಗಾಂಧಿ 'ರೈತರನ್ನು ಉಳಿಸಿ, ಭಾರತವನ್ನು ಉಳಿಸಿ' ಎಂಬ ಪೋಸ್ಟರ್ ಹಿಡಿದಿದ್ದರು.

ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಅಂಬಿಕಾ ಸೋನಿ, ಗೌರವ್ ಗೊಗೊಯ್, ಶಿವಸೇನೆಯ ಸಂಜಯ್ ರಾವತ್; ಆರ್ ಜೆಡಿಯ ಮನೋಜ್ ಝಾ,  ಡಿಎಂಕೆಯ ಟಿ.ಶಿವ  ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಸುದ್ದಿಸಂಸ್ಥೆ ಪಿಟಿಐ ಪ್ರಕಾರ, ಕಾಂಗ್ರೆಸ್ ಹೊರತುಪಡಿಸಿ, ಡಿಎಂಕೆ, ತೃಣಮೂಲ, ಎನ್‌ಸಿಪಿ, ಶಿವಸೇನೆ, ರಾಷ್ಟ್ರೀಯ ಜನತಾದಳ, ಸಮಾಜವಾದಿ ಪಕ್ಷ ಹಾಗೂ ದಿಲ್ಲಿಯ ಆಡಳಿತಾರೂಢ ಎಎಪಿ ಪ್ರತಿಭಟನೆಯಲ್ಲಿ ಭಾಗಿಯಾಗಿವೆ.

ಕೇಂದ್ರ ಕೃಷಿ ಕಾನೂನುಗಳನ್ನು ಪ್ರತಿಭಟಿಸುತ್ತಿರುವ ರೈತರು ತಮ್ಮ ಬೇಡಿಕೆಗಳ ಬಗ್ಗೆ ಗಮನ ಸೆಳೆಯಲು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ 'ಕಿಸಾನ್ ಸಂಸದ್' ಅಥವಾ 'ರೈತರ ಸಂಸತ್ತು' ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News