ಪೆಗಾಸಸ್ ಕುರಿತ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಅನುಮತಿಸದೇ ಇರಲು ಕೇಂದ್ರ ನಿರ್ಧಾರ: ವರದಿ
Update: 2021-08-06 18:09 IST
ಹೊಸದಿಲ್ಲಿ: ಸಿಪಿಐ ಸಂಸದ ಬಿನೊಯ್ ವಿಶ್ವಂ ಅವರು ಕೇಳಿದ ಪೆಗಾಸಸ್ ಬೇಹುಗಾರಿಕೆ ಕುರಿತ ಪ್ರಶ್ನೆಯೊಂದಕ್ಕೆ ರಾಜ್ಯಸಭೆಯಲ್ಲಿ ಆಗಸ್ಟ್ 12ರಂದು ಉತ್ತರ ನೀಡುವ ಬಗ್ಗೆ ನಿರ್ಧರಿತವಾಗಿದ್ದರೂ, ಸರಕಾರವು ಪೆಗಾಸಸ್ ಸ್ಪೈವೇರ್ ಮಾರಾಟ ಮಾಡುವ ಎನ್‍ಎಸ್‍ಒ ಗ್ರೂಪ್ ಜತೆಗೆ ಭಾರತ ಸರಕಾರ ಒಪ್ಪಂದಕ್ಕೆ ಬಂದಿತ್ತೇ ಎಂದು ಕೇಳಲಾಗಿರುವ ಈ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಅನುಮತಿಸದಿರಲು ಕೇಂದ್ರ ಸರಕಾರ ನಿರ್ಧರಿಸಿದೆಯೆನ್ನಲಾಗಿದ್ದು ಹಲವಾರು ಪಿಐಎಲ್‍ಗಳ ಹಿನ್ನೆಲೆಯಲ್ಲಿ ಈ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಅದನ್ನು ಅನುಮತಿಸುವುದಿಲ್ಲ ಎಂದು ಕೇಂದ್ರ ಹೇಳಿದೆಯೆನ್ನಲಾಗಿದೆ.
ಈ ಪ್ರಶ್ನೆಗೆ ಅನುಮತಿಯಿಲ್ಲ ಎಂದು ತನಗೆ ಅನೌಪಚಾರಿಕವಾಗಿ ಹೇಳಲಾಗಿದೆ ಔಪಚಾರಿಕ ಪ್ರತಿಕ್ರಿಯೆ ಇನ್ನಷ್ಟೇ ಬರಬೇಕಿದೆ ಎಂದು ಹೇಳಿರುವ ವಿಶ್ವಂ, ಕೇಂದ್ರ ಸರಕಾರವು ಪೆಗಾಸಸ್ ಕುರಿತ ಪ್ರಶ್ನೆಗಳನ್ನು ತಪ್ಪಿಸಲು ರಾಜ್ಯಸಭೆಯ ನಿಯಮಗಳನ್ನು ದುರುಪಯೋಗ ಪಡಿಸುತ್ತಿದೆ ಎಂದು ಹೇಳಿದ್ದಾರೆ ಎಂದು scroll.in ವರದಿ ಮಾಡಿದೆ.