×
Ad

ಮಧ್ಯಪ್ರದೇಶ ಭಾರೀ ಮಳೆ: 17 ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಘೋಷಿಸಿದ ಐಎಂಡಿ

Update: 2021-08-06 23:48 IST

ಭೋಪಾಲ್, ಆ. 6: ಭಾರೀ ಮಳೆ ಸುರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ನೆರೆಪೀಡಿತ ಮಧ್ಯಪ್ರದೇಶದ 17 ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ಆರೆಂಜ್ ಹಾಗೂ ಯೆಲ್ಲೊ ಅಲರ್ಟ್ ಘೋಷಿಸಿದೆ. ವಿಧಿಶಾ, ರೈಸೆನ್, ರಾಜಗಢ, ಗುನಾ ಹಾಗೂ ಅಶೋಕ ನಗರ ಜಿಲ್ಲೆಗಳಲ್ಲಿ ಆರಂಜ್ ಅಲರ್ಟ್ ಘೋಷಿಸಲಾಗಿದೆ. ಇತರ 12 ಜಿಲ್ಲೆಗಳಾದ ಸೆಹೋರೆ, ಶಾಜಪುರ, ಅಗರ್-ಮಾಲ್ವಾ, ನೀಮುಕ್, ಮಂದ್‌ಸೌರ್, ಶಿವಪುರಿ, ದಾತಿಯಾ, ಶಿಯೋಪುರ, ಸಿಯೋನಿ, ಸಾಗರ್, ಟಿಕಂಗಡ ಹಾಗೂ ನಿವಾರಿಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ ರಾಜಧಾನಿ ಭೋಪಾಲ್ ಹಾಗೂ ಜಬಲ್ಪುರ ಸೇರಿದಂತೆ 9 ವಿಭಾಗಗಳ ವ್ಯಾಪ್ತಿಯಲ್ಲಿ ಬರುವ ಹೆಚ್ಚಿನ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಹಾಗೂ ಸಿಡಿಲು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News