ಅಸ್ಸಾಂನಲ್ಲಿ ದಿಗ್ಭಂಧನ: ಔಷಧಗಳ ಕೊರತೆಯಿಂದ ಕೋವಿಡ್ ಸೋಂಕಿತರು ಸಾವು; ಮಿಜೋರಾಂ ಆರೋಗ್ಯ ಸಚಿವ

Update: 2021-08-07 18:16 GMT

ಗುವಾಹತಿ, ಆ. 7: ಮಿರೆರಾಂನಲ್ಲಿ ಇತ್ತೀಚೆಗೆ ಕೋವಿಡ್ ರೋಗಿಗಳು ಸಾವನ್ನಪ್ಪಿರುವುದಕ್ಕೆ ಅಸ್ಸಾಂನ ದಿಗ್ಭಂಧನವೇ ಕಾರಣ ಎಂದು ಮಿರೆರಾಂನ ಆರೋಗ್ಯ ಸಚಿವ ಆರ್. ಲಾಲ್ತಾಂಗ್ಲಿಯಾನ ಶನಿವಾರ ಆರೋಪಿಸಿದ್ದಾರೆ.

‘‘ಕೋವಿಡ್ ರೋಗಿಗಳು ಔಷಧಗಳ ಕೊರತೆಯಿಂದ ಸಾವನ್ನಪ್ಪುತ್ತಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಗಳಿಗೆ ಜೀವ ರಕ್ಷಕ ಔಷಧಗಳ ಅಗತ್ಯತೆ ಇದೆ’’ ಎಂದು ಅವರು ವೀಡಿಯೊವೊಂದರಲ್ಲಿ ಹೇಳಿದ್ದಾರೆ.

ದಿಗ್ಭಂದನ ಅವಧಿಯ ಸಂದರ್ಭ ಔಷಧಗಳ ಕೊರತೆಯಿಂದ ಸಾವನ್ನಪ್ಪಿದ ಕೋವಿಡ್ ಸೋಂಕಿತರ ಸಂಖ್ಯೆಯನ್ನು ಅವರು ನಿರ್ದಿಷ್ಟಪಡಿಸಿಲ್ಲ. ಆದರೆ, ಔಷಧ ಸಿಗದೆ 25 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

‘‘ದಿಗ್ಭಂಧನ ಆರಂಭವಾದ ಬಳಿಕ 25 ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದಾರೆ. ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು ಹಾಗೂ ಅವರು ಪರಿಸ್ಥಿತಿ ಅದಾಗಲೇ ಗಂಭೀರವಾಗಿತ್ತು. ಆರ್ಥಿಕ ದಿಗ್ಭಂಧನದಿಂದ ಉಂಟಾದ ಔಷಧಗಳ ಕೊರತೆ ಈ ಕೋವಿಡ್ ರೋಗಿಗಳ ಆರೋಗ್ಯ ತೀವ್ರವಾಗಿ ಹದಗೆಡಲು ಹಾಗೂ ಅವರು ಸಾವನ್ನಪ್ಪಲು ಕಾರಣವಾಗಿದೆ’’ ಎಂದು ಡಿಐಪಿಆರ್ನ ಉಪ ನಿರ್ದೇಶಕ ಹಾಗೂ ಗಡಿ ವಿಷಯಗಳ ಮಾಧ್ಯಮ ಘಟಕದ ಸದಸ್ಯ ಮಿನಾ ರೊಲಿಯಾನಿ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News