ವಾಟ್ಸ್ ಆ್ಯಪ್ ಮೂಲಕ ಸೆಕೆಂಡುಗಳಲ್ಲಿ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ: ಕೇಂದ್ರ ಆರೋಗ್ಯ ಸಚಿವ

Update: 2021-08-08 18:40 GMT

ಹೊಸದಿಲ್ಲಿ, ಆ. 8: ಕೋವಿಡ್ ಲಸಿಕೆಯ ಫಲಾನುಭವಿಗಳು ಇನ್ನು ಮುಂದೆ ವಾಟ್ಸ್ ಆ್ಯಪ್ ಮೂಲಕ ತಮ್ಮ ಪ್ರಮಾಣಪತ್ರಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ಅವರು ರವಿವಾರ ಹೇಳಿದ್ದಾರೆ.

ಕೋವಿಡ್ ಲಸಿಕೆ ಫಲಾನುಭವಿಗಳು ‘‘ಕೋವಿಡ್ ಸರ್ಟಿಫಿಕೇಟ್’’ ಎಂದು ಟೈಪ್ ಮಾಡಿ ಟೆಕ್ಸ್ಟ್ ಮೆಸೇಜ್ ಅನ್ನು ಮೊಬೈಲ್ ಸಂಖ್ಯೆ 9013151515ಕ್ಕೆ ರವಾನಿಸಬೇಕು. ಅವರು ಅನಂತರ ಪಾಸ್ವರ್ಡ್ ಅಥವಾ ಒಟಿಪಿ ಪಡೆಯುತ್ತಾರೆ. ಅದನ್ನು ಬಳಸಿ ಫಲಾನುಭವಿಗಳು ತಮ್ಮ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು ಎಂದು ಮಾಂಡವಿಯ ಟ್ವೀಟ್ ನಲ್ಲಿ ಬರೆದಿದ್ದಾರೆ.

‘‘ಸೆಕೆಂಡ್ ಗಳಲ್ಲಿ ನಿಮ್ಮ ಪ್ರಮಾಣಪತ್ರವನ್ನು ಪಡೆದುಕೊಳ್ಳಿ’’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಇದುವರೆಗೆ ಕೋವಿಡ್ ಲಸಿಕೆಯ ಫಲಾನುಭವಿಗಳು ಕೋವಿನ್ ವೆಬ್ಸೈಟ್ ನಲ್ಲಿ ನೋಂದಣಿ ಮಾಡಿಕೊಂಡು ತಮ್ಮ ಪ್ರಮಾಣ ಪತ್ರವನ್ನು ಪಡೆಯಬಹುದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News