ದ್ವೇಷ ಘೋಷಣೆ ಪ್ರಕರಣ:ಬಂಧನದ ಮರುದಿನವೇ ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯಗೆ ಜಾಮೀನು

Update: 2021-08-11 13:45 GMT

ಹೊಸದಿಲ್ಲಿ: ಜಂತರ್ ಮಂತರ್ ನಲ್ಲಿ ಆಗಸ್ಟ್ 8 ರಂದು ನಡೆದ ರ್ಯಾಲಿಯೊಂದರಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರ ನಡೆಸಲು ಕರೆ ನೀಡುವ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ  ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯರಿಗೆ ಬುಧವಾರ ದಿಲ್ಲಿ ನ್ಯಾಯಾಲಯವು ಜಾಮೀನು ನೀಡಿದೆ ಎಂದು ANI ವರದಿ ಮಾಡಿದೆ.

ಮಂಗಳವಾರ ಬೆಳಗ್ಗೆ ದಿಲ್ಲಿಯ ವಿವಿಧ ಭಾಗಗಳಿಂದ ಉಪಾಧ್ಯಾಯ ಹಾಗೂ  ಇತರ ಐವರನ್ನು ಪೊಲೀಸರು ಬಂಧಿಸಿದ್ದರು.  ಇತರ ಐದು ಮಂದಿಯನ್ನು ದೀಪಕ್ ಸಿಂಗ್, ವಿನೋದ್ ಶರ್ಮಾ, ವಿನೀತ್ ಬಾಜಪೇಯಿ, ಪ್ರೀತ್ ಸಿಂಗ್ ಹಾಗೂ  ದೀಪಕ್ ಕುಮಾರ್ ಎಂದು ಗುರುತಿಸಲಾಗಿದೆ. ಧಾರ್ಮಿಕ ದ್ವೇಷ ಹಾಗೂ ಕೋವಿಡ್ -19 ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಿಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಕಾಯಿದೆಯ ಸೆಕ್ಷನ್ 51 ರ ಮೇಲೆ ಆರೋಪ ಹೊರಿಸಲಾಗಿದೆ.

ಉಪಾಧ್ಯಾಯ ಅವರನ್ನು ಎರಡು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ನಂತರ ವಕೀಲ ಉಪಾಧ್ಯಾಯ ಜಾಮೀನು ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News