ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಚೇತಕರಾಗಿ ಕನ್ನಡಿಗ ನಾಸಿರ್ ಹುಸೇನ್ ನೇಮಕ
Update: 2021-08-11 19:31 IST
ಹೊಸದಿಲ್ಲಿ: ಕಾಂಗ್ರೆಸ್ ಪಕ್ಷವು ರಾಜ್ಯಸಭೆಯಲ್ಲಿ ತನ್ನ ಸಚೇತಕರನ್ನಾಗಿ ಕರ್ನಾಟಕದ ಸಂಸದರಾದ ಸಯ್ಯದ್ ನಾಸೀರ್ ಹುಸೇನ್ ಹಾಗೂ ಛತ್ತೀಸ್ ಗಢದ ಸಂಸದೆ ಛಾಯಾ ವರ್ಮಾ ಅವರನ್ನು ಬುಧವಾರ ನೇಮಿಸಿದೆ ಎಂದು ಪಕ್ಷದ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.
"ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಂಸದರಾದ ಸಯ್ಯದ್ ನಾಸೀರ್ ಹುಸೇನ್ ಹಾಗೂ ಛಾಯಾ ವರ್ಮಾ ಅವರನ್ನು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಸಚೇತಕರನ್ನಾಗಿ ನೇಮಿಸಿದ್ದಾರೆ" ಎಂದು ಮೇಲ್ಮನೆಯ ಕಾಂಗ್ರೆಸ್ ಮುಖ್ಯ ಸಚೇತಕ ಜೈರಾಮ್ ರಮೇಶ್ ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ರಾಜ್ಯ ಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಉಪ ನಾಯಕರಾಗಿ ಆನಂದ್ ಶರ್ಮಾ ಕಾರ್ಯನಿರ್ವಹಿಸುತ್ತಿದ್ದಾರೆ.