×
Ad

ವೇಶ್ಯಾವಾಟಿಕೆ: ಕೆ-ಪಾಪ್ ತಾರೆಗೆ 3 ವರ್ಷ ಜೈಲು‌

Update: 2021-08-12 19:54 IST

ಸಿಯೋಲ್ (ದಕ್ಷಿಣ ಕೊರಿಯ), ಆ. 12: ದಕ್ಷಿಣ ಕೊರಿಯದ ಮಾಜಿ ಕೆ-ಪಾಪ್ ತಾರೆ ಸಿಯುಂಗ್ರಿ ವಿರುದ್ಧದ ವೇಶ್ಯಾವಾಟಿಕೆ ಹಾಗೂ ಲೈಂಗಿಕ ಮತ್ತು ಮಾದಕ ವಸ್ತು ಹಗರಣಕ್ಕೆ ಸಂಬಂಧಿಸಿದ ಆರೋಪಗಳು ಸಾಬೀತಾಗಿವೆ ಹಾಗೂ ಸೇನಾ ನ್ಯಾಯಾಲಯವೊಂದು ಗುರುವಾರ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.


ಅವರ ವಿರುದ್ಧದ ಎಲ್ಲ ಒಂಬತ್ತು ಆರೋಪಗಳಲ್ಲೂ ಅವರ ಅಪರಾಧ ಸಾಬೀತಾಗಿದೆ ಎಂದು ರಕ್ಷಣಾ ಸಚಿವಾಲಯದ ಅಧಿದಕಾರಿಯೊಬ್ಬರು ಎಎಪ್ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

ಹಗರಣ ವ್ಯಾಪಿಸುತ್ತಿರುವಂತೆಯೇ ಪ್ರಸಿದ್ಧ ಬಾಯ್ಬ್ಯಾಂಡ್ ‘ಬಿಗ್ಬ್ಯಾಂಗ್’ನ 30 ವರ್ಷದ ಹಾಡುಗಾರ ರಂಗದಲ್ಲಿ ಹಾಡುವುದರಿಂದ ನಿವೃತ್ತಿ ಪಡದು ಸೇನೆಗೆ ಸೇರಿದ್ದರು.
ಯಶಸ್ವಿ ಉದ್ಯಮಿಯಾಗಿದ್ದ ಅವರು, ತನ್ನ ಉದ್ಯಮದಲ್ಲಿ ಹಣ ಹೂಡುವವರಿಗೆ ಮಹಿಳೆಯರನ್ನು ಪೂರೈಸುತ್ತಿದ್ದ ಆರೋಪವನ್ನು ಎದುರಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News