ರಶ್ಯ: ದೇಶದ್ರೋಹ ಪ್ರಕರಣದಡಿ ಹೈಪರ್‌ಸಾನಿಕ್ ಸಂಶೋಧನಾ ಕೇಂದ್ರದ ಮುಖ್ಯಸ್ಥನ ಬಂಧನ

Update: 2021-08-12 14:29 GMT

ಮಾಸ್ಕೊ, ಆ.12: ಮಾಸ್ಕೋದಲ್ಲಿರುವ ಹೈಪರ್‌ಸಾನಿಕ್ ತಂತ್ರಜ್ಞಾನ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥನನ್ನು ದೇಶದ್ರೋಹದ ಆರೋಪದಡಿ ಬಂಧಿಸಿರುವುದಾಗಿ ‘ತಾಸ್’ ಸುದ್ಧಿಸಂಸ್ಥೆ ಗುರುವಾರ ವರದಿ ಮಾಡಿದೆ.

ಹೈಪರ್‌ಸಾನಿಕ್ ತಂತ್ರಜ್ಞಾನದ ವಿಶೇಷಜ್ಞ ಅಲೆಕ್ಸಾಂಡರ್ ಕುರನೋವ್ ಬಂಧಿತ ಅಧಿಕಾರಿಯಾಗಿದ್ದು ಈತನನ್ನು 2 ತಿಂಗಳು ಕಸ್ಟಡಿಗೆ ವಿಧಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡುವುದಾಗಿ ರಶ್ಯಾದ ಫೆಡರಲ್ ಭದ್ರತಾ ಸಂಸ್ಥೆ ಹೇಳಿದೆ.

 ಶೀತಲ ಯುದ್ಧದ ಯುಗದ ಬಳಿಕ, 2014ರಿಂದ ರಶ್ಯಾ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳ ನಡುವಿನ ಸಂಬಂಧ ಉತ್ತಮವಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ರಶ್ಯಾ ಹಲವಾರು ಸೂಪರ್‌ಸಾನಿಕ್ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಿದ್ದು ಇವು ಸರಿಸಾಟಿಯಿಲ್ಲದ ಅಸ್ತ್ರಗಳು ಎಂದು ಅಧ್ಯಕ್ಷ ಪುಟಿನ್ ಬಣ್ಣಿಸಿದ್ದಾರೆ. ಈ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸೂಕ್ಷ್ಮ ಮತ್ತು ಮಹತ್ವದ ಮಾಹಿತಿಗಳನ್ನು ವಿದೇಶಕ್ಕೆ ರವಾನಿಸಿದ ಆರೋಪದಲ್ಲಿ ಹಲವು ವಿಜ್ಞಾನಿಗಳು, ಯೋಧರು, ಅಧಿಕಾರಿಗಳನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News