ಲಸಿಕೆ ಬಳಿಕದ ಕೋವಿಡ್ ಸೋಂಕು ಪತ್ತೆ ಹಚ್ಚಲು ಕೇಂದ್ರದಿಂದ ಆನ್ಲೈನ್ ವೇದಿಕೆ

Update: 2021-08-12 18:16 GMT

ಅಹಮದಾಬಾದ್, ಆ. 12: ಕೋವಿಡ್ ಲಸಿಕೆ ತೆಗೆದುಕೊಂಡ ಬಳಿಕ ಕೆಲವರಿಗೆ ಕೋವಿಡ್ ಸೋಂಕು ತಗಲುತ್ತಿರುವ ಪ್ರಕರಣಗಳು ದೇಶಾದ್ಯಂತ ವರದಿಯಾಗುತ್ತಿದೆ. ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಲು ಕೇಂದ್ರ ಸರಕಾರ ಮುಂದಿನ ವಾರ ಆನ್ಲೈನ್ ವೇದಿಕೆಯೊಂದನ್ನು ಅರಂಭಿಸಲು ಯೋಜಿಸಿದೆ. ಸಾರ್ವಜನಿಕ ಡೊಮೈನ್ ನಲ್ಲಿ ಲಭ್ಯವಾಗುವ ಈ ಆನ್ಲೈನ್ ವೇದಿಕೆಯಲ್ಲಿ ಕೋವಿಡ್ ಲಸಿಕೆ ತೆಗೆದುಕೊಂಡ ಬಳಿಕ ಸೋಂಕಿಗೆ ಒಳಗಾದವರ, ಆಸ್ಪತ್ರೆಗೆ ದಾಖಲಾದವರ ಹಾಗೂ ಸಾವುಗಳ ಸಂಖ್ಯೆಯ ಮಾಹಿತಿ ನೀಡಲಿದೆ ಎಂದು ಅದು ತಿಳಿಸಿದೆ. 

ಕೋವಿಡ್ ಲಸಿಕೆಯ ಹೆಸರು, ಆರ್ಟಿ-ಪಿಸಿಆರ್ ವರದಿ ಹಾಗೂ ಸೋಂಕಿಗೆ ಒಳಗಾದವರ ಸ್ಥಿತಿಗತಿಯ ದತ್ತಾಂಶವನ್ನು ಈ ಆನ್ಲೈನ್ ವೇದಿಕೆ ಸಂಗ್ರಹಿಸಲಿದೆ ಎಂದು ಅದು ಹೇಳಿದೆ. ‘‘ದೇಶಾದ್ಯಂತ ಕೋವಿಡ್ ಲಸಿಕೆ ತೆಗೆದುಕೊಂಡ ಬಳಿಕ ಸೋಂಕಿಗೊಳಗಾದವರ ಕುರಿತು ಈ ಆನ್ಲೈನ್ ವೇದಿಕೆ ವಿಶ್ಲೇಷಣೆ ನಡೆಸಲಿದೆ. ಹೀಗೆ ಸೋಂಕಿಗೊಳಗಾದವರ ಮಾದರಿಯನ್ನು ರಾಜ್ಯದಿಂದ ಕೋರಲಿದೆ. ಅಲ್ಲದೆ, ವೈರಸ್ ನ ಗಾತ್ರ, ಮಾದರಿ ಹಾಗೂ ನಡವಳಿಕೆ ಪತ್ತೆ ಹಚ್ಚಲು ಜೆನೋಮಿಕ್ ಸೀಕ್ವೆನ್ಸ್ ಮಾಡಲಿದೆ’’ ಎಂದು ಕೇಂದ್ರ ಆರೋ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News