×
Ad

ಬ್ರಿಟನ್: 3 ವರ್ಷದ ಬಾಲಕಿ ಸೇರಿದಂತೆ ಐವರನ್ನು ಗುಂಡಿಕ್ಕಿ ಕೊಂದ ಬಂದೂಕುಧಾರಿ

Update: 2021-08-14 00:03 IST
photo: Twitter

ಪ್ಲೈಮೌತ್, ಬ್ರಿಟನ್‌: ದಕ್ಷಿಣ ಇಂಗ್ಲೀಷ್ ನಗರವಾದ ಪ್ಲೈಮೌತ್‌ನಲ್ಲಿ ಬಂದೂಕುಧಾರಿಯೊಬ್ಬ ಪಂಪ್-ಆ್ಯಕ್ಷನ್ ಶಾಟ್‌ಗನ್‌ನಿಂದ ಆರು ನಿಮಿಷಗಳಲ್ಲಿ 3 ವರ್ಷದ ಬಾಲಕಿ ಸೇರಿದಂತೆ 5 ಜನರನ್ನು ಗುಂಡಿಕ್ಕಿ ಕೊಂದಿದ್ದಾನೆ.

ಬ್ರಿಟನ್ ನಲ್ಲಿ ಸಾಮೂಹಿಕ ಗುಂಡಿನ ದಾಳಿಗಳು ಅಪರೂಪವಾಗಿದ್ದು, ಅಲ್ಲಿ ಗನ್ ಮಾಲೀಕತ್ವವು ತುಲನಾತ್ಮಕವಾಗಿ ಕಡಿಮೆಯಾಗಿದೆ, ಗುರುವಾರ  ಒಂದು ದಶಕಕ್ಕಿಂತಲೂ ಹೆಚ್ಚು ಸಮಯದ ಬಳಿಕ ದುಷ್ಕೃತ್ಯವೊಂದು ನಡೆದಿದೆ.

ಪೊಲೀಸರು ಶುಕ್ರವಾರ ಶೂಟರ್‌ ನನ್ನು 22 ವರ್ಷದ ಕ್ರೇನ್ ಆಪರೇಟರ್ ಜೇಕ್ ಡೇವಿಸನ್ ಎಂದು ಹೆಸರಿಸಿದ್ದಾರೆ. ಡೇವಿಸನ್ ಗುರುವಾರ ಸಂಜೆ ಐವರನ್ನು ಕೊಂದ ನಂತರ ಬಳಿಕ ಸ್ವತಃ ಗುಂಡಿಕ್ಕಿಕೊಂಡು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News