​ಕಾಬೂಲ್ ಹೊಸ್ತಿಲಲ್ಲಿ ತಾಲಿಬಾನ್: ಸ್ಥಳಾಂತರಕ್ಕೆ ಸಜ್ಜಾದ ರಾಯಭಾರ ಕಚೇರಿಗಳು

Update: 2021-08-14 04:01 GMT
ಫೈಲ್ ಫೋಟೊ (source: PTI)

ಕಾಬೂಲ್, ಆ.14: ಅಫ್ಘಾನಿಸ್ತಾನದ ಪ್ರಮುಖ ನಗರಗಳನ್ನು ಶುಕ್ರವಾರ ತಾಲಿಬಾನ್ ಪಡೆಗಳು ವಶಪಡಿಸಿಕೊಂಡಿದ್ದು, ಇಡೀ ಅಫ್ಘಾನಿಸ್ತಾನದ ನಿಯಂತ್ರಣಕ್ಕೆ ಮುಂದಾಗಿವೆ. ರಾಜಧಾನಿ ಕಾಬೂಲ್ ನಗರಕ್ಕೆ ತಾಲಿಬಾನ್ ಪಡೆಗಳು ಸನಿಹವಾಗಿರುವ ಹಿನ್ನೆಲೆಯಲ್ಲಿ, ರಾಜಧಾನಿಯಿಂದ ಸಾವಿರಾರು ಮಂದಿಯನ್ನು ಸ್ಥಳಾಂತರಿಸಲು ಅಮೆರಿಕ ಮುಂದಾಗಿದೆ.

ಇಪ್ಪತ್ತು ವರ್ಷಗಳ ಹಿಂದೆ ಸೆಪ್ಟಂಬರ್ 11ರಂದು ದಾಳಿ ನಡೆಸಿದ ಬಳಿಕ ತಾಲಿಬಾನ್ ಅಧಿಕಾರವನ್ನು ಪದಚ್ಯುತಗೊಳಿಸಿ ಕೋಟ್ಯಂತರ ಡಾಲರ್‌ಗಳನ್ನು ಸುರಿದ ಅಮೆರಿಕ ನೇತೃತ್ವದ ಮಿತ್ರಪಡೆಗಳು ಮತ್ತು ಅಫ್ಘನ್ನರಿಗೆ ಆಘಾತ ತರುವ ರೀತಿಯಲ್ಲಿ ತಾಲಿಬಾನ್ ತನ್ನ ದಾಳಿಯನ್ನು ಮುಂದುವರಿಸಿದೆ.

ಅಂತಿಮವಾಗಿ ಅಮೆರಿಕ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ಆದೇಶವನ್ನು ಅಧ್ಯಕ್ಷ ಜೋ ಬೈಡೆನ್ ಹೊರಡಿಸುವ ಕೆಲವೇ ದಿನಗಳಿಗೆ ಮೊದಲು ಹಲವಾರು ಮಂದಿ ಸೈನಿಕರು, ಸೇನಾ ಘಟಕಗಳು ಹಾಗೂ ಇಡೀ ವಿಭಾಗಗಳು ಶರಣಾಗತರಾಗಿದ್ದು, ದಾಳಿಕೋರರಿಗೆ ಇದರಿಂದಾಗಿ ಹೆಚ್ಚುವರಿ ವಾಹನಗಳು ಹಾಗೂ ಮಿಲಿಟರಿ ಸಾಧನ- ಸಲಕರಣೆಗಳು ಲಭ್ಯವಾಗಿವೆ. ಇದು ತಾಲಿಬಾನ್‌ನ ಮಿಂಚಿನ ಮುನ್ನಡೆಗೆ ಕಾರಣವಾಗಿದೆ.

ಲೊಗ್ಹಾರ್ ಪ್ರಾಂತ್ಯದ ರಾಜಧಾನಿ ಪುಲ್-ಇ-ಆಲಂ ನಗರವನ್ನು ಶುಕ್ರವಾರ ತಾಲಿಬಾನ್ ವಶಪಡಿಸಿಕೊಂಡಿದ್ದು, ಇದರಿಂದಾಗಿ ತಾಲಿಬಾನ್ ಪಡೆಗಳು ಕಾಬೂಲ್‌ನಿಂದ ಕೇವಲ 30 ಮೈಲು ದೂರಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News