"ಮೋದಿ ಭಾರತದ ರಾಜನೇನೂ ಅಲ್ಲ": ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ಕಿಡಿ

Update: 2021-08-14 10:00 GMT

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆರ್ಥಿಕ ಮತ್ತು ವಿದೇಶಿ ನೀತಿಗಳಿಗೆ ತಾನು ವಿರೋಧ ಎಂದು ಹಿರಿಯ ಬಿಜೆಪಿ ನಾಯಕ ಮತ್ತು ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಸುಬ್ರಮಣಿಯನ್‌ ಸ್ವಾಮಿಯ ಆಯ್ಕೆಯ ಸಚಿವ ಸ್ಥಾನವನ್ನು ನೀಡಲಿಲ್ಲ ಎಂಬ ಕಾರಣಕ್ಕೆ ಅವರು ಕೋಪಗೊಂಡಿದ್ದಾರೆ ಎಂಬ ಟ್ವಿಟರ್‌ ಬಳಕೆದಾರರೋರ್ವರ ಟ್ವೀಟ್‌ ಗೆ ಉತ್ತರಿಸಿದ ಸುಬ್ರಮಣಿಯನ್‌ ಸ್ವಾಮಿ, ನಾನು ಬೇರೆ ಕಾರಣಕ್ಕಾಗಿ ಮೋದಿ ವಿರೋಧಿಯಾಗಿದ್ದೇನೆ ಎಂದು ಹೇಳಿದ್ದಾರೆ.

"ನಾನು ಆರ್ಥಿಕತೆ ಮತ್ತು ವಿದೇಶಾಂಗ ನೀತಿಗಾಗಿ ಮೋದಿ ವಿರೋಧಿ ಮತ್ತು ಅದರ ಬಗ್ಗೆ ಯಾವುದೇ ಜವಾಬ್ದಾರಿಯುತರೊಂದಿಗೆ ಚರ್ಚಿಸಲು ನಾನು ಸಿದ್ಧ. ʼಭಾಗವಹಿಸುವ ಪ್ರಜಾಪ್ರಭುತ್ವʼದ ಬಗ್ಗೆ ನೀವು ಕೇಳಿದ್ದೀರಾ? ಮೋದಿ ಭಾರತದ ರಾಜನಲ್ಲ" ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.

"ಅಧಿಕಾರಶಾಹಿ ಜೋಡಿಗಳಾಗಿರುವ ಜೈಶಂಕರ್‌ ಮತ್ತು ಧೋವಲ್‌ ಭಾರತವನ್ನು ಅಂತಾರಾಷ್ಟ್ರೀಯವಾಗಿ ಯಾವ ಮಟ್ಟಕ್ಕೆ ಇಳಿಸಿದ್ದಾರೆ ಮತ್ತು ಅದಕ್ಕಾಗಿ ಅವರು ದೇಶದ ಕ್ಷಮೆ ಯಾಚಿಸುತ್ತಾರೆಯೇ? ಅವರು ಮೋದಿಯ ಆಪ್ತ ರಾಜಕಾರಣಿಗಳೆಂಬ ಕಾರಣಕ್ಕೆ ಅವರಿಗೆ ಮುಕ್ತ ಅವಕಾಶ ನೀಡಲಾಗಿದೆಯೇ ಹೊರತು ಅನುಭವಿ ರಾಜಕಾರಣಿಗಳೆಂದಲ್ಲ. ಈಗ ನಾವು ನಮ್ಮ ಅಕ್ಕಪಕ್ಕದವರೊಂದಿಗೆ ಗೊಂದಲ ಸೃಷ್ಟಿಸಿದ್ದೇವೆ" ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News