ಶಾಲಾ ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡಿ ಜಾತಿನಿಂದನೆಗೈದ ಹೆಡ್‍ಮಾಸ್ಟರ್ ಬಂಧನ

Update: 2021-08-14 11:03 GMT

ಕೊಲ್ಕತ್ತಾ: ಪೂರ್ವ ಮಿಡ್ನಾಪುರ ಜಿಲ್ಲೆಯ ಶಾಲೆಯ ಮಹಿಳಾ ಸಿಬ್ಬಂದಿಯೊಬ್ಬರ ಜಾತಿ ನಿಂದನೆಗೈದು ಅವರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಅಲ್ಲಿನ ಹೆಡ್‍ಮಾಸ್ಟರ್ ಒಬ್ಬರನ್ನು ಬಂಧಿಸಲಾಗಿದೆ. ಗರ್ಭಿಣಿಯಾಗಿದ್ದ ಸಂತ್ರಸ್ತೆಯು ಹೆಡ್‍ಮಾಸ್ಟರ್ ನಿಂದನೆಯಿಂದ ಮಾನಸಿಕ ಆಘಾತಕ್ಕೊಳಗಾಗಿ ಗರ್ಭಪಾತಕ್ಕೊಳಗಾಗಿದ್ದರೆಂದು ದೂರಲಾಗಿದೆ.

ಆರೋಪಿ ಹೆಡ್‍ಮಾಸ್ಟರ್ ನಂದೀಶ್ ನಿಯೋಜಿ ಎಂಬವರನ್ನು ನ್ಯಾಯಾಲಯಕ್ಕೆ ಶುಕ್ರವಾರ ಹಾಜರುಪಡಿಸಲಾಗಿದೆ. ಆತನನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ. ಆತನ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‍ಗಳನ್ವಯ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯಿದೆಯನ್ವಯ ಪ್ರಕರಣ ದಾಖಲಿಸಲಾಗಿದೆ.

ಜುಲೈ 2019ರಂದು ಶಾಲೆಗೆ ಹೆಡ್‍ಮಾಸ್ಟರ್ ಆಗಿ ನೇಮಕಗೊಂಡಂದಿನಿಂದ ದೂರುದಾರೆ ಮೌಸುಮಿ ದಾಸ್ ಅವರಿಗೆ ಕಿರುಕುಳ ನೀಡುತ್ತಿದ್ದರೆಂದು ಹೇಳಲಾಗಿದ್ದು ಆದರೆ ಆಕೆಗೆ ಮಾನಸಿಕ ಆಘಾತದಿಂದ ಗರ್ಭಪಾತವಾದ ನಂತರವಷ್ಟೇ ಆಕೆ ಆತನ ವಿರುದ್ಧ ದೂರು ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News