ರಾಹುಲ್ ಗಾಂಧಿ ಟ್ವಿಟರ್ ಖಾತೆ ಮರುಸ್ಥಾಪನೆ: 'ಸತ್ಯಮೇವ ಜಯತೇ’ ಎಂದ ಕಾಂಗ್ರೆಸ್
ಹೊಸದಿಲ್ಲಿ: ವಾಯುವ್ಯ ದಿಲ್ಲಿಯಲ್ಲಿ ಅತ್ಯಾಚಾರ ಹಾಗೂ ಕೊಲೆಗೀಡಾದ 9 ವರ್ಷದ ಬಾಲಕಿಯ ಕುಟುಂಬ ಸದಸ್ಯರ ಜೊತೆಗಿರುವ ಫೋಟೊವನ್ನು ಹಂಚಿಕೊಂಡಿರುವುದಕ್ಕೆ ರಾಹುಲ್ ಗಾಂದಿಯವರ ಟ್ವಿಟರ್ ಖಾತೆಯನ್ನು ಕಳೆದ ವಾರ ತಾತ್ಕಾಲಿಕವಾಗಿ ಲಾಕ್ ಮಾಡಿದ್ದ ಟ್ವಿಟರ್ ಸಂಸ್ಥೆ ಇಂದು ಖಾತೆಯನ್ನು ಮರುಸ್ಥಾಪಿಸಿದೆ. ಟ್ವಿಟರ್ ವಿರುದ್ದ ರಾಹುಲ್ ವಾಗ್ದಾಳಿ ನಡೆಸಿರುವ ಮರುದಿನವೇ ಈ ಹೆಜ್ಜೆ ಇಟ್ಟಿದೆ. ಇದಕ್ಕೆ ಉತ್ತರವಾಗಿ ಕಾಂಗ್ರೆಸ್ ಪಕ್ಷವು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ‘ಸತ್ಯಮೇವ ಜಯತೇ’ ಎಂದಷ್ಟೇ ಟ್ವೀಟ್ ಮಾಡಿದೆ.
“ಲಾಕ್ ಮಾಡಲಾಗಿದ್ದ ಎಲ್ಲ ಕಾಂಗ್ರೆಸ್ ನಾಯಕರ ಖಾತೆಗಳನ್ನು ಅನ್ ಲಾಕ್ ಮಾಡಲಾಗಿದೆ. ಅನ್ ಲಾಕ್ ಮಾಡಿದ್ದಕ್ಕೆ ಯಾವುದೇ ಕಾರಣವನ್ನು ಟ್ವಿಟರ್ ನೀಡಿಲ್ಲ’’ ಎಂದು ಕಾಂಗ್ರೆಸ್ ನ ಸಾಮಾಜಿಕ ಮಾಧ್ಯಮ ಖಾತೆಗಳ ಉಸ್ತುವಾರಿ ರೋಹನ್ ಗುಪ್ತಾ NDTVಗೆ ತಿಳಿಸಿದ್ದಾರೆ.
ರಾಹುಲ್ ಗಾಂಧಿ ನಿರ್ದಿಷ್ಟ ಚಿತ್ರವನ್ನು ಬಳಸಲು ಔಪಚಾರಿಕ ಒಪ್ಪಿಗೆ ಅಥವಾ ಅಧಿಕೃತ ಪತ್ರದ ಪ್ರತಿಯನ್ನು ಸಲ್ಲಿಸಿದ್ದಾರೆ ಎಂದು ಟ್ವಿಟರ್‌ನ ವಕ್ತಾರರು ಹೇಳಿದರು.
Satyameva Jayate
— Congress (@INCIndia) August 14, 2021