ಕೋವಿಡ್ 2ನೇ ಅಲೆಯಲ್ಲಿ ಹಲವರು ಸಾವನ್ನಪ್ಪಿದ್ದಕ್ಕೆ ನೋವಾಗಿದೆ: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್
Update: 2021-08-14 19:37 IST
ಹೊಸದಿಲ್ಲಿ: ಸ್ವಾತಂತ್ರ್ಯ ದಿನದ ಮುನ್ನಾ ದಿನವಾದ ಶನಿವಾರ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಕೋವಿಡ್ -19 ರ ಎರಡನೇ ಅಲೆಯಲ್ಲಿ ಸಂಭವಿಸಿರುವ ಅಪಾರ ಸಂಖ್ಯೆಯ ಸಾವುಗಳಿಗೆ ಸಂತಾಪ ಸೂಚಿಸಿದ್ದು, ಈ ಸಾವುಗಳು ನನಗೆ ನೋವುಂಟು ಮಾಡಿದೆ. ಈ ನೋವು ಮರೆಯಲಾಗಲ್ಲ ಎಂದಿದ್ದಾರೆ.
"ಕಳೆದ ವರ್ಷದಂತೆಯೇ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯು ಕೊರೋನವೈರಸ್ ಸಾಂಕ್ರಾಮಿಕದಿಂದಾಗಿ ಕಳೆಗುಂದಿದೆ. ಕೊರೋನದ ಎರಡನೇ ಅಲೆಯ ಸಮಯದಲ್ಲಿ ಅನೇಕ ಜನರು ಪ್ರಾಣ ಕಳೆದುಕೊಂಡಿರುವುದರಿಂದ ನನಗೆ ನೋವಾಗಿದೆ. ನಾನು ನಿಮ್ಮ ಜೊತೆ ಇದ್ದೇನೆ ಎಂದು ಅವರ ಕುಟುಂಬಗಳಿಗೆ ಹೇಳಲು ಬಯಸುತ್ತೇನೆ. ಕೊರೋನ ಸಂಕಷ್ಟದ ಸಮಯದಲ್ಲಿ ಭಾರತವು ಇತರ ದೇಶಗಳಿಗೆ ನೆರವು ನೀಡಿದೆ" ಎಂದು ಕೋವಿಂದ್ ಹೇಳಿದರು.