ಕ್ಯೂಬಾ ಅಧಿಕಾರಿಗಳು, ಸೇನಾ ಘಟಕದ ಮೇಲೆ ಅಮೆರಿಕ ದಿಗ್ಬಂಧನ

Update: 2021-08-14 15:38 GMT

ವಾಶಿಂಗ್ಟನ್, ಆ. 14: ಕ್ಯೂಬಾದ ಆಂತರಿಕ ಸಚಿವಾಲಯದ ಇಬ್ಬರು ಅಧಿಕಾರಿಗಳು ಮತ್ತು ಒಂದು ಸೇನಾ ಘಟಕದ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸುವುದಾಗಿ ಅಮೆರಿಕದ ಹಣಕಾಸು ಸಚಿವಾಲಯ ಶುಕ್ರವಾರ ತಿಳೀಸಿದೆ. ಕಳೆದ ತಿಂಗಳು ಪ್ರತಿಭಟನಕಾರರ ವಿರುದ್ಧ ಕ್ಯೂಬಾ ಸರಕಾರ ನಡೆಸಿದ ದಮನ ಕಾರ್ಯಾಚರಣೆಗೆ ಪ್ರತಿಯಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ.


ಆಂತರಿಕ ಸಚಿವಾಲಯದ ಇಬ್ಬರು ಅಧಿಕಾರಿಗಳು ಮತ್ತು ಕ್ಯೂಬಾದ ಕ್ರಾಂತಿಕಾರಿ ಸಶಸ್ತ್ರ ಪಡೆಗಳ ಸಚಿವಾಲಯದ ಟ್ರೋಪಸ್ ಡಿ ಪ್ರಿವೆನ್ಶನ್ (ಟಿಡಿಪಿ) ಎಂಬ ಘಟಕದ ವಿರುದ್ಧ ದಿಗ್ಬಂಧನ ಹೇರಲಾಗಿದೆ ಎಂದು ಹಣಕಾಸು ಇಲಾಖೆ ತಿಳಿಸಿದೆ.

‘‘ಜನರ ಪ್ರತಿಭಟನೆಯನ್ನು ಹತ್ತಿಕ್ಕಲು ಟಿಡಿಪಿ ಘಟಕವನ್ನು ನಿಯೋಜಿಸಲಾಗಿತ್ತು. ಆ ಸೈನಿಕರು ಪ್ರತಿಭಟನಕಾರರ ಮೇಲೆ ದಾಳಿ ಮಾಡಿ ಅವರನ್ನು ಹೊಡೆದರು ಹಾಗೂ ಹಿಂಸಾತ್ಮಕವಾಗಿ ಅವರನ್ನು ಬಂಧಿಸಿದರು’’ ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News