ಗುರುಪುರ : ರಾಯಲ್ ಗೈ‌ಸ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Update: 2021-08-15 09:52 GMT

ಗುರುಪುರ : ಅಲ್ ಹೈದ್ರೊಸಿಯ ಜುಮಾ ಮಸೀದಿಯಾ ವಠಾರದಲ್ಲಿ  ಉಸ್ತಾದ್ ಸೈಫುಲ್ಲಾ  ಝೌಹರಿ ದುವಾಃ ಮಾಡಿ ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ವಿವರಿಸಿದರು. ಹಸನಬ್ಬ ಧ್ವಜಾರೋಹಣ ನೆರವೇರಿಸಿದರು.

ಎಲ್ ಜಿ ಎ ಸಂಘದ ಅಧ್ಯಕ್ಷರಾದ ಹಮೀದ್ ಯು.ಎಚ್ ಮತ್ತು ಉಪಾಧ್ಯಕ್ಷರಾದ ಅಶ್ರಫ್ ಬಿ.ಎಚ್ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ನವಾಝ್ ,ಲತೀಫ್, ಆಸೀಪ್ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು

ಕಾರ್ಯಕ್ರಮದ ನಿರೂಪಣೆಯನ್ನು ನಹೀಂ ಜಿ.ಮ್. ಮತ್ತು ನಿಸ್ಸಾರ್ ನೆರವೇರಸಿದರು. ಸ್ವಾಗತ ಭಾಷಣವನ್ನು ರಿಕ್ಷಾ ಯುಸೂಫ್ ಹಾಗೂ ಫಾರೂಕ್ ವಂದನಾರ್ಪಣೆಯನ್ನು ನೆರವೇರಿಸಿದರು.

ಈ ಕಾರ್ಯಕ್ರಮಕ್ಕೆ ಸಿಹಿ ತಿಂಡಿಗಳನ್ನು ಅಬ್ದುಲ್ಲ ಮತ್ತು ರಝ್ವಿ ಅವರು ವಿತರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News