ರೋಹಿಂಗ್ಯಾ ವಲಸಿಗರಿದ್ದ ದೋಣಿ ಮಗುಚಿ 24ಕ್ಕೂ ಅಧಿಕ ಮಂದಿ ನಾಪತ್ತೆ

Update: 2021-08-15 13:03 GMT

 ಢಾಕಾ: ಬಂಗಾಳಕೊಲ್ಲಿಯಲ್ಲಿ ದೊಡ್ಡದಾದ ದೋಣಿಯು ಮಗುಚಿ ಬಿದ್ದಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ 24ಕ್ಕೂ ಅಧಿಕ ರೋಹಿಂಗ್ಯಾ ವಲಸಿಗರು ನಾಪತ್ತೆಯಾಗಿದ್ದಾರೆ. ಅವರು ಸಮುದ್ರದಲ್ಲಿ ಮುಳುಗಿರುವ ಭೀತಿ ಇದೆ ಎಂದು ವಿಶ್ವಸಂಸ್ಥೆ ಹಾಗೂ ಬಾಂಗ್ಲಾದೇಶದ ಪೊಲೀಸರು ತಿಳಿಸಿದ್ದಾರೆ.

ಮ್ಯಾನ್ಮಾರ್ ಗಡಿಗೆ ಹೊಂದಿಕೊಂಡಿದ್ದ ಶಿಬಿರಗಳಲ್ಲಿದ್ದ ಸಾವಿರಾರು ವಲಸಿಗರನ್ನು ದ್ವೀಪ ಪ್ರದೇಶವೊಂದಕ್ಕೆ ಸ್ಥಳಾಂತರಿಸಲಾಗುತ್ತಿದೆ. ಈ ಪ್ರಕ್ರಿಯೆಯನ್ನು ವಿಶ್ವಸಂಸ್ಥೆ ಹಾಗೂ ಮಾನವ ಹಕ್ಕುಗಳ ಸಂಘಟನೆಗಳು ಟೀಕಿಸಿದ್ದವು. ದ್ವೀಪ ಪ್ರದೇಶ ವಾಸಕ್ಕೆ ಯೋಗ್ಯವಾಗಿಲ್ಲ ಎಂದು ಅವು ಅಭಿಪ್ರಾಯಪಟ್ಟಿದ್ದವು.

ವಲಸಿಗರನ್ನು ಒಯ್ಯುತ್ತಿದ್ದ ದೋಣಿಯು ಆ.14ರ ಬೆಳಗ್ಗೆ ಭಸನ್ ಚರ್ ದ್ವೀಪದ ಬಳಿಕ ಮಗುಚಿದೆ ಎಂದು ಮಾಹಿತಿ ಲಭಿಸಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಹಲವರು ಮುಳುಗಿದ್ದಾರೆ. ಎಷ್ಟು ಜನರಿದ್ದರು ಎಂದು ಮಾಹಿತಿ ಇಲ್ಲ ಎಂದು ವಿಶ್ವಸಂಸ್ಥೆಯ ವಲಸಿಗರ ಸಂಸ್ಥೆಯು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News