×
Ad

ಕಾಬೂಲ್ ನಿಂದ ದಿಲ್ಲಿಗೆ ಹೊರಟ 129 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ

Update: 2021-08-15 18:58 IST

ಹೊಸದಿಲ್ಲಿ: ಕಲಹ ಪೀಡಿತ ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿರುವ 129 ಭಾರತೀಯ ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ವಿಮಾನ ಅಫ್ಘಾನ್ ರಾಜಧಾನಿ ಕಾಬೂಲ್ ನಿಂದ  ದಿಲ್ಲಿಯತ್ತ ಹೊರಟಿದೆ ಎಂದು ಮೂಲಗಳು ತಿಳಿಸಿವೆ. 

ಎಐ-244 ವಿಮಾನವು  ಇಂದು ರಾತ್ರಿ ಹೊಸದಿಲ್ಲಿಗೆ ಬರುವ ನಿರೀಕ್ಷೆಯಿದೆ. ತಾಲಿಬಾನ್ ಅಫ್ಘಾನಿಸ್ತಾನದ ದೇಶದ ಮೇಲೆ ಸಂಪೂರ್ಣ ಅಧಿಕಾರ ವಹಿಸಿಕೊಂಡಿರುವ ಕಾರಣ ಏರ್ ಇಂಡಿಯಾ ವಿಮಾನವು ವಾರಕ್ಕೆ ಮೂರು ಬಾರಿ ಕಾಬೂಲ್‌ಗೆ ಹೋಗುವುದು ಅನಿಶ್ಚಿತವಾಗಿದೆ.

ಇಂದು ಮುಂಜಾನೆ ಕಾಬೂಲ್‌ಗೆ ಒಂದು ಚಾರ್ಟರ್ ವಿಮಾನವನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾಬೂಲ್ ವಾಯುಪ್ರದೇಶದಲ್ಲಿ ಮಿಲಿಟರಿ ಚಟುವಟಿಕೆ ಹೆಚ್ಚಾಗುತ್ತಿದ್ದಂತೆ, ನಾಗರಿಕ ವಿಮಾನಗಳನ್ನು ನಿರ್ವಹಿಸುವುದು ಸವಾಲಾಗಿ ಪರಿಣಮಿಸಿದೆ.

ತಾಲಿಬಾನ್ ಇಂದು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ಪ್ರವೇಶಿಸಿದೆ. ಹೀಗಾಗಿ ಅಮೆರಿಕವು ತನ್ನ ರಾಯಭಾರ ಕಚೇರಿಯಿಂದ ರಾಜತಾಂತ್ರಿಕರನ್ನು ಹೆಲಿಕಾಪ್ಟರ್ ಮೂಲಕ ಸ್ಥಳಾಂತರಿಸಿದೆ. ಸರಕಾರದ ಸಚಿವರು ಅಧಿಕಾರವನ್ನು ಮಧ್ಯಂತರ ಆಡಳಿತಕ್ಕೆ ನೀಡಲಾಗುವುದು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News