×
Ad

ಮಹೊಬಾ: ಕಿರುಕುಳದ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಮಹಿಳೆಯ ಬೆಂಕಿ ಹಚ್ಚಿ ಹತ್ಯೆ

Update: 2021-08-17 23:24 IST

ಮಹೊಬಾ, ಆ. 17: ಕಿರುಕುಳ ನೀಡುತ್ತಿರುವ ನೆರೆಯ ವ್ಯಕ್ತಿಯೋರ್ವರ ವಿರುದ್ಧ ಪ್ರಕರಣ ದಾಖಲಿಸಿದ ಮಹಿಳೆಯೋರ್ವರನ್ನು ಆತನ ಕುಟುಂಬಿಕರು ಬೆಂಕಿ ಹಚ್ಚಿ ಹತ್ಯೆಗೈದಿದ್ದಾರೆ ಎನ್ನಲಾದ ಘಟನೆ ಮಹೊಬಾದಲ್ಲಿ ನಡೆದಿದೆ. ನೆರೆಯ ವಿಪಿನ್ ಎಂಬಾತನ ಕುಟುಂಬದವರು ಬೆಂಕಿ ಹಚ್ಚಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಮಹಿಳೆಯನ್ನು ಚಿಕಿತ್ಸೆಗಾಗಿ ಝಾನ್ಸಿ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿ ವಿಪಿನ್ ನ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ ಹಾಗೂ ಪ್ರಕರಣದ ತನಿಖೆ ನಡೆಯುತ್ತಿದೆ. ದಂಡಾಧಿಕಾರಿ ಮುಂದೆ ರವಿವಾರ ನೀಡಿದ ಹೇಳಿಕೆಯಲ್ಲಿ ಮಹಿಳೆ, ವಿಪಿನ್ ತನಗೆ ಥಳಿಸಿದ ಹಾಗೂ ಕಿರುಕುಳ ನೀಡಿರುವ ಕುರಿತು ಶನಿವಾರ ಪ್ರಕರಣ ದಾಖಲಿಸಿದ್ದೇನೆ ಎಂದಿದ್ದರು. ಅನಂತರ ಆರೋಪಿ ವಿಪಿನ್ ನನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಇದರಿಂದ ಆಕ್ರೋಶಗೊಂಡ ವಿಪಿನ್ ನ ಹೆತ್ತವರು ಬೆಂಕಿ ಹಚ್ಚಿ ಮಹಿಳೆಯನ್ನು ಹತ್ಯೆಗೈದಿದ್ದಾರೆ ಎಂದು ಕುಲ್ಫಾರ ಪೊಲೀಸ್ ಠಾಣೆಯ ಅಧಿಕಾರಿ ಮಹೇಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News