×
Ad

ಎಎಸ್‍ಐ ತಾಯಿ, ಡಿವೈಎಸ್‍ಪಿ ಮಗ ಪರಸ್ಪರ ಸೆಲ್ಯೂಟ್ ಮಾಡುತ್ತಿರುವ ಚಿತ್ರ ಸಾಮಾಜಿಕ ತಾಣದಾದ್ಯಂತ ವೈರಲ್

Update: 2021-08-21 15:05 IST
Photo: twitter/dineshdasa1

ಹೊಸದಿಲ್ಲಿ:  ಪೊಲೀಸ್ ಇಲಾಖೆಯಲ್ಲಿ ಎಎಸ್‍ಐ ಆಗಿರುವ ತಾಯಿಯೊಬ್ಬರು ತಮ್ಮ ಡಿವೈಎಸ್‍ಪಿ ಪುತ್ರನಿಗೆ ಸೆಲ್ಯೂಟ್ ಹೊಡೆಯುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗುಜರಾತ್ ಲೋಕಸೇವಾ ಆಯೋಗದ ಅಧ್ಯಕ್ಷ ದಿನೇಶ್ ದಾಸ ಈ ಚಿತ್ರವನ್ನು ಶೇರ್ ಮಾಡಿದ್ದಾರೆ. "ಎಎಸ್‍ಐ ತಾಯಿಯೊಬ್ಬರಿಗೆ ತಮ್ಮ ಡಿವೈಎಸ್‍ಪಿ ಪುತ್ರ @ವಿಶಾಲ್_ರಬರಿ ತಮ್ಮ ಮುಂದೆ ನಿಂತು ಸೆಲ್ಯೂಟ್ ಹೊಡೆಯುತ್ತಿರುವುದು ಅತ್ಯಂತ ಭಾವುಕ ಕ್ಷಣ, ಗುಜರಾತ್ ಲೋಕಸೇವಾ ಆಯೋಗ ಈ ಪರಿಪೂರ್ಣ ಚಿತ್ರದೊಂದಿಗೆ ಸಂಭ್ರಮಿಸುತ್ತಿದೆ" ಎಂದು ಅವರು ಬರೆದಿದ್ದಾರೆ.

ಆಗಸ್ಟ್ 18ರಂದು ಮೊದಲು ಶೇರ್ ಮಾಡಲಾದ ಪೋಸ್ಟ್ ಗೆ ಈಗಾಗಲೇ 5,000ಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು ನೂರಾರು ಮಂದಿ ಖುಷಿಯಿಂದ ಕಮೆಂಟ್‍ಗಳನ್ನೂ ಮಾಡಿದ್ದಾರೆ. ವಿಶಾಲ್ ರಾಬರಿ ಕೂಡ ಕಮೆಂಟ್ ಮಾಡಿ ಈ ಚಿತ್ರ ಟ್ವೀಟ್ ಮಾಡಿದ ದಾಸ ಆವರಿಗೆ ಧನ್ಯವಾದ ತಿಳಿಸಿದ್ದಾರೆ.

"ತಾಯಿ ಮತ್ತು ಮಗ ಹೆಮ್ಮೆಯಿಂದ ಒಬ್ಬರನ್ನೊಬ್ಬರು ನೋಡುತ್ತಿದ್ದಾರೆ, ನಿಮ್ಮಿಬ್ಬರನ್ನು ನೋಡಲು ನಮಗೆ ಹೆಮ್ಮೆಯಾಗುತ್ತಿದೆ" ಎಂದು ಚಿತ್ರವನ್ನು ಶೇರ್ ಮಾಡಿದ ಟ್ವಿಟ್ಟರಿಗರೊಬ್ಬರು ಪ್ರತಿಕ್ರಿಯಿಸಿದ್ದರೆ ಇನ್ನೊಬ್ಬರು "ತಾಯಿಯ ಕಣ್ಣುಗಳಲ್ಲಿ ಹೆಮ್ಮೆಯ ಹೊಳಪು, ಸೆಲ್ಯೂಟ್" ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News